Home ಟಾಪ್ ಸುದ್ದಿಗಳು ಸೌದಿ ಅರೇಬಿಯಾ: ಜಿಪಿಎಸ್ ಸಿಗ್ನಲ್ ಕಳೆದುಕೊಂಡು ಮರುಭೂಮಿಯಲ್ಲಿ ಭಾರತದ ವ್ಯಕ್ತಿ ಮೃತ್ಯು

ಸೌದಿ ಅರೇಬಿಯಾ: ಜಿಪಿಎಸ್ ಸಿಗ್ನಲ್ ಕಳೆದುಕೊಂಡು ಮರುಭೂಮಿಯಲ್ಲಿ ಭಾರತದ ವ್ಯಕ್ತಿ ಮೃತ್ಯು

ಹೈದರಾಬಾದ್: ಸೌದಿ ಅರೇಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ತೆಲಂಗಾಣದ 27 ವರ್ಷದ ಯುವಕ ಆಹಾರ ಮತ್ತು ನೀರಿಲ್ಲದೆ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಸಾವನ್ನಪ್ಪಿದ್ದಾರೆ.

ಟೆಲಿಕಮ್ಯುನಿಕೇಷನ್ ಕಂಪನಿಯಲ್ಲಿ ಮೂರು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಕರೀಂನಗರದ ನಿವಾಸಿ ಮೊಹಮ್ಮದ್ ಶೆಹಜಾದ್ ಖಾನ್, ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಮರುಭೂಮಿಯ ನಿರ್ಜನ ಮತ್ತು ಅಪಾಯಕಾರಿ ಖಾಲಿ ಕ್ವಾರ್ಟರ್ ಭಾಗದಲ್ಲಿ ಸಿಕ್ಕಿಬಿದ್ದಿದ್ದರು.

ಅವರ ಜಿಪಿಎಸ್ ಸಿಗ್ನಲ್ ವಿಫಲವಾದ ನಂತರ ಸುಡಾನ್ ಪ್ರಜೆಯೊಂದಿಗೆ ಶೆಹ್ಜಾದ್ ದಾರಿ ತಪ್ಪಿದಾಗ ಮರುಭೂಮಿಯ ಬಿಸಿಲಿನ ತಾಪದಲ್ಲಿ ಅವರು ಆಹಾರ ಮತ್ತು ನೀರಿಲ್ಲದೆ ಮೃತಪಟ್ಟರು.

ಶೆಹಜಾದ್‌ನ ಮೊಬೈಲ್ ಫೋನ್ ಬ್ಯಾಟರಿಯು ಕೂಡಾ ಚಾರ್ಜ್‌ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ಅಲ್ಲದೆ ಅವರ ವಾಹನದ ಇಂಧನ ಖಾಲಿಯಾದ ಕಾರಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

Join Whatsapp
Exit mobile version