Home ಟಾಪ್ ಸುದ್ದಿಗಳು ಭಾರತ- ನ್ಯೂಜಿಲೆಂಡ್ ಮೊದಲ ಟೆಸ್ಟ್: ಮಳೆಯಿಂದಾಗಿ ರದ್ದು

ಭಾರತ- ನ್ಯೂಜಿಲೆಂಡ್ ಮೊದಲ ಟೆಸ್ಟ್: ಮಳೆಯಿಂದಾಗಿ ರದ್ದು

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪಂದ್ಯದ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ.


ನಿಗದಿಯಂತೆ ಇಂದು ಮುಂಜಾನೆ 9 ಗಂಟೆಗೆ ಉಭಯ ತಂಡಗಳ ನಡುವೆ ಟಾಸ್ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಟಾಸ್ ಸಹ ನಡೆಯಲು ಸಾಧ್ಯವಾಗಲಿಲ್ಲ.

ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ, ತುಂತುರು ಮಳೆ ಬೀಳುತ್ತಲೇ ಇದೆ. ಮಳೆ ಕೊಂಚ ಕಡಿಮೆಯಾದಾಗಲೆಲ್ಲ ಅಂಪೈರ್ ಗಳು ಮೈದಾನವನ್ನು ಪರಿಶೀಲಿಸಿದರು. ಆದರೆ ಪಂದ್ಯಕ್ಕೆ ಮೈದಾನ ಸಜ್ಜಾಗಿಲ್ಲದ್ದನ್ನು ಮನಗಂಡ ಅಂಪೈರ್ಸ್ ಕಾದು ನೋಡುವ ತಂತ್ರಕ್ಕೆ ಮುಂದಾದರು.

ಹೀಗಾಗಿ ಮೊದಲ ದಿನದಾಟದ ಮೊದಲೆರಡು ಸೆಷನ್ ಗಳವರೆಗೂ ಪಂದ್ಯವನ್ನು ನಡೆಸಲು ಕಾಯಲಾಯಿತು. ಆದರೆ ಆ ಬಳಿಕವೂ ಮಳೆ ನಿಲ್ಲದನ್ನು ಗಮನಿಸಿದ ಅಂಪೈರ್ಸ್, ದಿನದಾಟವನ್ನು ರದ್ದುಗೊಳಿಸಲು ಮುಂದಾದರು.

Join Whatsapp
Exit mobile version