Home Uncategorized ಜೊಹರ್ ಕಪ್ ಜೂನಿಯರ್ ಪುರುಷರ ಹಾಕಿ | ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಜೊಹರ್ ಕಪ್ ಜೂನಿಯರ್ ಪುರುಷರ ಹಾಕಿ | ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಮಲೇಷ್ಯಾದ ನಡೆದ ಜೊಹರ್ ಕಪ್ ಜೂನಿಯರ್ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಮೂರನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ಶನಿವಾರ ನಡೆದ ಆಸ್ಟ್ರೇಲಿಯಾ -ಭಾರತ ನಡುವಿನ ಫೈನಲ್‌ ಪಂದ್ಯ ಪೂರ್ಣಾವಧಿಯ ವೇಳೆ 1-1 ಗೋಲುಗಳ ಅಂತರದಲ್ಲಿ ಅಂತ್ಯಕಂಡಿತ್ತು ಈ ಹಿನ್ನಲೆಯಲ್ಲಿ ವಿಜೇತರನ್ನು ನಿರ್ಣಯಿಸಲು ನೀಡಲಾದ ಪೆನಾಲ್ಟಿ ಶೂಟೌಟ್‌ ಸಹ 3-3 ಅಂತರದಲ್ಲಿ ಸಮಬಲಗೊಂಡತು. ಆ ಬಳಿಕ ಸಡನ್‌ ಡೆತ್‌ಗೆ ಮುಂದುವರಿಯಲ್ಪಟ್ಟ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿತು.

ಪಂದ್ಯದ ಮೊದಲಾರ್ಧದ 14ನೇ ನಿಮಿಷದಲ್ಲಿ ಸುದೀಪ್ ಚಿರ್ಮಾಕೊ ಗೋಲಿನ ಮೂಲಕ ಭಾರತ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಕ್ವಾರ್ಟರ್‌ನ  28ನೇ ನಿಮಿಷದಲ್ಲಿ ಜ್ಯಾಕ್ ಹಾಲೆಂಡ್ ಗೋಲಿನ ಮೂಲಕ ಆಸ್ಟ್ರೇಲಿಯಾ ಸಮಬಲ ಸಾಧಿಸಿತು.

Join Whatsapp
Exit mobile version