Home ಟಾಪ್ ಸುದ್ದಿಗಳು ಜೋ ಬೈಡನ್ ರ ಶ್ವೇತಭವನದ ಡಿಜಿಟಲ್ ತಂಡದಲ್ಲಿ ಕಾಶ್ಮೀರ ಮೂಲದ ಆಯಿಷಾ ಶಾಗೆ ಹಿರಿಯ ಸ್ಥಾನ

ಜೋ ಬೈಡನ್ ರ ಶ್ವೇತಭವನದ ಡಿಜಿಟಲ್ ತಂಡದಲ್ಲಿ ಕಾಶ್ಮೀರ ಮೂಲದ ಆಯಿಷಾ ಶಾಗೆ ಹಿರಿಯ ಸ್ಥಾನ

ವಾಷಿಂಗ್ಟನ್ : ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರ ಶ್ವೇತಭವನ ಕಚೇರಿಯ ಡಿಜಿಟಲ್ ತಂತ್ರಗಾರಿಕೆಯ ತಂಡದಲ್ಲಿ ಭಾರತದ ಕಾಶ್ಮೀರ ಮೂಲದ ಆಯಿಷಾ ಶಾ ಹಿರಿಯ ಸ್ಥಾನವೊಂದಕ್ಕೆ ನೇಮಕಗೊಂಡಿದ್ದಾರೆ.

ಶ್ವೇತಭವನದ ಡಿಜಿಟಲ್ ತಂತ್ರಗಾರಿಕೆಯ ಸಹಭಾಗಿತ್ವಗಳ ನಿರ್ವಾಹಕರ ಹುದ್ದೆಗೆ ಆಯಿಷಾ ನೇಮಕಗೊಂಡಿದ್ದಾರೆ. ಡಿಜಿಟಲ್ ತಂತ್ರಗಾರಿಕೆ ನಿರ್ದೇಶನಾಲಯದ ಮುಖ್ಯಸ್ಥರಾಗಿ ರಾಬ್ ಫ್ಲಾಹೆರ್ಟಿ ಆಯ್ಕೆಯಾಗಿದ್ದಾರೆ.

ಕಾಶ್ಮೀರ ಮೂಲದ ಆಯಿಷಾ ಲೂಸಿಯಾನದಲ್ಲಿ ಬೆಳೆದವರು. ಬೈಡನ್-ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರದಲ್ಲಿ ಡಿಜಿಟಲ್ ಸಹಭಾಗಿತ್ವಗಳ ನಿರ್ವಾಹಕರಾಗಿ ಅವರು ಸೇವೆ ಸಲ್ಲಿಸಿದ್ದರು.

Join Whatsapp
Exit mobile version