ಮೈಸೂರು: ಮಳೆಗೆ ಉರುಳಿಬಿದ್ದ ಮರಗಳ ತೆರವಿಗೆ ಕೈ ಜೋಡಿಸಿದ ಲಷ್ಕರ್ ಠಾಣಾ ಮತ್ತು ದೇವರಾಜ ಸಂಚಾರ ಠಾಣಾ ಪೊಲೀಸರು

Prasthutha|

ಮೈಸೂರು: ಬಿರುಗಾಳಿ ಸಮೇತ ಬಿದ್ದ ಭಾರಿ ಮಳೆಗೆ ಮೈಸೂರು ನಗರದ ಹಲವಡೆ ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದೆ. ಮರದ ಕೊಂಬೆಗಳ ತೆರವಿಗೆ ಪಾಲಿಕೆ ಸಿಬ್ಬಂದಿಯೊಂದಿಗೆ ಪೊಲೀಸರು ಕೂಡ ಕೈ ಸೇರಿಸಿದ್ದು, ಪೊಲೀಸರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಭಾರಿ ಮಳೆಗೆ ಒಟ್ಟು ಐದು ಮರಗಳ ಕೊಂಬೆಗಳು ಮುರಿದುಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಸಿಬ್ಬಂದಿ ಸಮೇತ ಆಗಮಿಸಿದ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಸಲೀಂ‌ ಅಬ್ಬಾಸ್ ಮತ್ತು ದೇವರಾಜ ಸಂಚಾರ ಠಾಣಾ ಸಿಬ್ಬಂದಿ ಪಾಲಿಕೆಯ ತಂಡದೊಂದಿಗೆ ಸೇರಿ ರಸ್ತೆಗೆ ಅಡ್ಡಲಾಗಿ ಮರಿದು ಬಿದ್ದ ಕೊಂಬೆಗಳ ತೆರವಿಗೆ ಕೈ ಜೋಡಿಸಿದರು. ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ಮತ್ತು ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಸಹ ಸಾಥ್ ನೀಡಿದ್ದಾರೆ.

ಪೊಲೀಸರ ಕಾರ್ಯವೈಖರಿಗೆ ಇಲಾಖಾ ಮೇಲಾಧಿಕಾರಿಗಳು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version