Home ಟಾಪ್ ಸುದ್ದಿಗಳು ಕಾಲರಾ ಪ್ರಕರಣ ಹೆಚ್ಚಳ; ಪಾನಿಪುರಿ ಮಾರಾಟ ನಿಷೇಧಿಸಿದ ನೇಪಾಳ

ಕಾಲರಾ ಪ್ರಕರಣ ಹೆಚ್ಚಳ; ಪಾನಿಪುರಿ ಮಾರಾಟ ನಿಷೇಧಿಸಿದ ನೇಪಾಳ

ಕಠ್ಮಂಡು: ನೇಪಾಳದಲ್ಲಿ ಏಕಾಏಕಿ  ಪಾನಿಪುರಿ ಮಾರಾಟವನ್ನು ನಿಷೇಧಿಸಲಾಗಿದೆ.

ಪಾನಿಪುರಿ ತಯಾರಿಸುತ್ತಿದ್ದ ನೀರಿನಲ್ಲಿ ಕಾಲರಾ ಬ್ಯಾಕ್ಟಿರಿಯಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಲಲಿತ್ ಪುರ್ ಮೆಟ್ರೋಪಾಲಿಟನ್ ಸಿಟಿ (ಎಲ್ಎಂಸಿ) ಪಾನಿಪುರಿ ಮಾರಾಟವನ್ನು ನಿರ್ಬಂಧಿಸುವಂತೆ ಸೂಚನೆ ನೀಡಿದೆ.

ಲಲಿತ್ ಪುರ್ ಮೆಟ್ರೋಪಾಲಿಟನ್ ಸಿಟಿಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಈ ವರೆಗೂ ಈ ಪ್ರದೇಶದಲ್ಲಿ 12 ಮಂದಿಗೆ ಕಾಲರಾ ದೃಢಪಟ್ಟಿದೆ. ಪಾನಿಪುರಿ ತಿಂದ 12ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ದಾಖಲಾಗಿದ್ದು, ಹೀಗಾಗಿ ಪಾನಿಪುರಿ ಯನ್ನು ಆರೋಗ್ಯ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದಾರೆ.

 ಈ ಹಿಂದೆ ಕಠ್ಮಂಡು ನಗರದ ವಿವಿಧ ಭಾಗಗಳಲ್ಲಿ ಒಟ್ಟು 5 ಕಾಲರ ಬ್ಯಾಕ್ಟೀರಿಯಾ ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ಒಂದೇ ಬಾರಿ 12 ಮಂದಿ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ಪಾಲಿಕೆ ಎಚ್ಚೆತ್ತುಕೊಂಡಿದೆ. ಇದೀಗ ಕಠ್ಮಂಡುವಿನಲ್ಲಿ ಕಾಲರ ಪ್ರಕರಣ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಳಸುವ ನೀರು, ಪಾನಿಪೂರಿ ಸೇರಿದಂತೆ ರಸ್ತೆ ಬದಿಯ ತಿನಿಸುಗಳು ಹಾಗೂ ಹೊರಗಿನ ತನಿಸುಗಳ ಕುರಿತು ಎಚ್ಚರಿಕೆ ವಹಿಸುವಂತೆ  ನಾಗರಿಕರಲ್ಲಿ ಮನವಿ ಮಾಡಲಾಗಿದೆ.ಬೇಸಿಗೆ ಕಾಲ ಹಾಗೂ ಮಳೆಗಾಲದಲ್ಲಿ ಕಾಲರಾ ಬ್ಯಾಕ್ಟೀರಿಯಾ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು,  ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರೂ ಈ ಬಗ್ಗೆ ಅತೀವ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕಾಲರ ರೋಗ ನೀರಿನ ಮೂಲಕ ಹರಡುತ್ತದೆ. ನೀರಿನಲ್ಲಿ ಕಾಲರ ಬ್ಯಾಕ್ಟೀರಿಯಾಗಳು ಮನುಷ್ಯನ ದೇಹದೊಳಕ್ಕೆ ಸುಲಭವಾಗಿ ಸೇರಿಕೊಳ್ಳಲಿದೆ. ಕಾಲರಾಗೆ ತುತ್ತಾದ ವ್ಯಕ್ತಿಗಳು ತೀವ್ರವಾದ ಅತಿಸಾರ ಹಾಗೂ ನಿರ್ಜಲೀಕರಣಕ್ಕೆ ಗುರಿಯಾಗುತ್ತಾರೆ. ತಕ್ಕ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಜೀವಕ್ಕೆ ಅಪಾಯವುಂಟಾಗುವ ಸಾಧ್ಯತೆ ಹೆಚ್ಚು. ಉತ್ತಮ ಆರೋಗ್ಯವಂತರಿಗೂ ಇದು ಅನ್ವಯಿಸುತ್ತದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version