ಮಂಗಳೂರು: ಕಳೆದ ಶನಿವಾರ ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿ ಮಾನಹಾನಿಕರ ಸಂದೇಶಗಳನ್ನು ರವಾನಿಸಿರುವ ಆರೋಪದಡಿ ಜೆಡಿಎಸ್ ಮುಖಂಡ ಮೊಯ್ದಿನ್ ಬಾವ ಅವರ ಬೆಂಬಲಿಗರು ಎನ್ನಲಾದ ಮೂವರ ವಿರುದ್ಧ ಸುರತ್ಕಲ್ ಹಾಗೂ ಬಜಪೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಮುಖಂಡರು ದೂರು ದಾಖಲಿಸಿದ್ದು, Ex MLA Dr.MBava Fans ವಾಟ್ಸಾಪ್ ಗ್ರೂಪ್‌ನಲ್ಲಿ 9980385002 ನಂಬರಿನ ಮುನಾವರ್ ಯಾನೆ ಶರೀಫ್, MOHOYUDDIN BAVA Fans ಹೆಸರಿನ ವಾಟ್ಸಾಪ್ ಗ್ರೂಪ್‌ನಲ್ಲಿ 9535436033 ನಂಬರಿನ ಮೊಹಮ್ಮದ್ ಇಮ್ರಾನ್ ಚೊಕ್ಕಬೆಟ್ಟು ಮತ್ತು 2023 ಶಾಸಕರು ಮೊಯ್ದಿನ್ ಬಾವ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ 9902174580 ನಂಬರಿನ ಶಯಾನ್ ಹೆಸರಿನ ಮೂವರು ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ದೂರು ನೀಡುವ ವೇಳೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಸದಾಶಿವ ಶೆಟ್ಟಿ, ಶಶಿಕಲಾ ಪದ್ಮನಾಭ, ಬಶೀರ್ ಬೈಕಂಪಾಡಿ, ಶಮೀರ್ ಕಾಟಿಪಳ್ಳ, ಸತ್ತಾರ್ ಕೃಷ್ಣಾಪುರ, ರಾಜೇಶ್ ಕುಳಾಯಿ, ಜಲೀಲ್ ಬದ್ರಿಯಾ, ಹೇಮಂತ್, ಚಂದ್ರಹಾಸ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬಜಪೆ ಪೋಲಿಸ್ ಠಾಣೆಯಲ್ಲಿಯೂ ದೂರು ನೀಡಲಾಗಿದ್ದು, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಆರ್.ಕೆ.ಪೃಥ್ವಿರಾಜ್, ಕೃಷ್ಣ ಅಮೀನ್, ಯು.ಪಿ.ಇಬ್ರಾಹಿಂ, ಮೆಲ್ವಿನ್, ಬಾಷ ಗುರುಪುರ, ರಾಜ್ ಕುಮಾರ್ ಶೆಟ್ಟಿ, ಸಿರಾಜ್ ಮೋನು, ಮುಸ್ತಫಾ ಗಂಜೀಮಠ, ಶರೀಫ್ ಉಳಾಯಿಬೆಟ್ಟು, ಎ.ಕೆ.ಹಾರಿಸ್, ಶೇಖ್ ಕಂದಾವರ ಹಾಗೂ ಇಸಾಕ್ ಉಳಾಯಿಬೆಟ್ಟು ಹಾಗೂ ಇನ್ನಿತರರು ಉಪಸ್ಥಿತರಿದ್ದರು.