Home ಟಾಪ್ ಸುದ್ದಿಗಳು ಹಿಂದೂ ಯುವಕರನ್ನು ಬಂಧಿಸಿದರೆ ನರಗುಂದ ಹೊತ್ತಿ ಉರಿಯಲಿದೆ: ಮತ್ತೆ ನಾಲಗೆ ಹರಿಯಬಿಟ್ಟ ಮುತಾಲಿಕ್

ಹಿಂದೂ ಯುವಕರನ್ನು ಬಂಧಿಸಿದರೆ ನರಗುಂದ ಹೊತ್ತಿ ಉರಿಯಲಿದೆ: ಮತ್ತೆ ನಾಲಗೆ ಹರಿಯಬಿಟ್ಟ ಮುತಾಲಿಕ್

ಗದಗ: ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದ ಮುಸ್ಲಿಮ್ ಯುವಕನ ಹತ್ಯೆ ಸಂಬಂಧಿಸಿದಂತೆ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಇನ್ನಷ್ಟು ಹಿಂದೂ ಯುವಕರನ್ನು ಬಂಧಿಸುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ನರಗುಂದ ಹೊತ್ತಿ ಉರಿಯಲಿದೆ ಎಂದು ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿ ಮತ್ತೊಮ್ಮೆ ತನ್ನ ನಾಲಗೆಯನ್ನು ಹರಿಯ ಬಿಟ್ಟಿದ್ದಾರೆ.

ನರಗುಂದ ಮುಸ್ಲಿಮ್ ಯುವಕನ ಹತ್ಯೆಗೆ ಸಂಬಂಧೀಸಿ ಬಂಧಿತ ಆರೋಪಿಗಳನ್ನು ಭೇಟಿ ಮಾಡಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗದಗ ಜೈಲಿಗೆ ಆಗಮಿಸಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರಗುಂದದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನು ಮುಂದಿಟ್ಟುಕೊಂಡು ಕೊಲೆಯಲ್ಲಿ ಹಿಂದೂ ಯುವಕರನ್ನು ಗುರಿಯಾಗಿಸಿ ಬಂಧಿಸಲಾಗುತ್ತಿದೆ. ಇದನ್ನು ಮುಂದುವರಿಸಿದರೆ ನರಗುಂದ ಹೊತ್ತಿ ಉರಿಯಲಿದೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದರು.

ಮಾತ್ರವಲ್ಲ ಜಿಲ್ಲಾಧಿಕಾರಿ ಎಂ. ಸುಂದರೇಶ್ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಹಿಂದೂ ಯುವಕರು ಭಯದಿಂದ ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುತಾಲಿಕ್ ಅವರೊಂದಿಗೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ನರಗುಂದದಲ್ಲಿ ಸಮೀರ್ ಎಂಬಾತನನ್ನು ಸಂಘಪರಿವಾರ ಕಾರ್ಯಕರ್ತರು ಇರಿದು ಹತ್ಯೆ ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

Join Whatsapp
Exit mobile version