Home ಟಾಪ್ ಸುದ್ದಿಗಳು ದೇಶಾದ್ಯಂತ ಗಾಂಧಿ ಪುಣ್ಯ ಸ್ಮರಣೆ: ವ್ಯಕ್ತಿಯನ್ನು ಸಾಯಿಸಬಹುದು ಸಿದ್ಧಾಂತವನ್ನಲ್ಲ-ಸಿದ್ದರಾಮಯ್ಯ

ದೇಶಾದ್ಯಂತ ಗಾಂಧಿ ಪುಣ್ಯ ಸ್ಮರಣೆ: ವ್ಯಕ್ತಿಯನ್ನು ಸಾಯಿಸಬಹುದು ಸಿದ್ಧಾಂತವನ್ನಲ್ಲ-ಸಿದ್ದರಾಮಯ್ಯ

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಗೈಯ್ಯುವ ಮೂಲಕ ದೇಶದ ಮೊದಲ ಭಯೋತ್ಪಾದನಾ ಕೃತ್ಯ ನಡೆದ ಇಂದು (ಜನವರಿ 30) ಜಗತ್ತಿನಾದ್ಯಂತ ಗಾಂಧಿಯ ಸ್ಮರಣೆ ನಡೆದಿದೆ.
ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದ ನಾಥೂರಾಮ್ ಗೋಡ್ಸೆ 1948 ಜನವರಿ 30ರಂದು ಗುಂಡಿಟ್ಟು ಹತ್ಯೆ ಮಾಡಿದ್ದ. ಇದು ದೇಶದ ಮೊದಲ ಭಯೋತ್ಪಾದನಾ ಕೃತ್ಯ ಎಂದು ಇತಿಹಾಸದಲ್ಲಿ ದಾಖಲಾಗಿದೆ.
ಕಾಂಗ್ರೆಸ್, ಜೆಡಿಎಸ್, ಎಸ್ ಡಿಪಿಐ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಇಂದು ಗಾಂಧಿ ಪುಣ್ಯತಿಥಿಯಂದು ಅವರ ಕೊಡುಗೆಯನ್ನು ಸ್ಮರಿಸಿದೆ.


ಕೆಪಿಸಿಸಿ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ,ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ , ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಎಐಸಿಸಿ ಪದಾಧಿಕಾರಿಗಳು, ಪಕ್ಷದ ನಾಯಕರುಗಳು ಭಾಗವಹಿಸಿದ್ದರು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ, ‘ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಗಾಂಧೀಜಿಯವರ ಜೀವನ, ಅವರ ನಡೆ ಮತ್ತು ನುಡಿಗಳು ನಮಗೆ ಈಗಲೂ ಪ್ರೇರಣೆ’ ಎಂದು ಟ್ವೀಟ್ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಮಹಾತ್ಮ ಗಾಂಧೀಜಿ ಕೇವಲ ವ್ಯಕ್ತಿ ಅಲ್ಲ, ಅವರೊಂದು ಸಿದ್ದಾಂತ ವ್ಯಕ್ತಿಯನ್ನು ಸಾಯಿಸ ಬಹುದು, ಸಿದ್ದಾಂತವನ್ನಲ್ಲ. ಗಾಂಧಿ ತತ್ವ-ಸಿದ್ಧಾಂತದ ಹಾದಿಯಲ್ಲಿ ಮುನ್ನಡೆದು ಅವರನ್ನು ಅಜರಾಮರರನ್ನಾಗಿ ಮಾಡೋಣ ಎಂದು ತಿಳಿಸಿದ್ದಾರೆ.


ಪಿಎಫ್ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಟ್ವೀಟ್ ಮಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಳಿಯರ ಬೆಂಬಲಕ್ಕೆ ನಿಂತು ಭಾರತೀಯರ ಬೆನ್ನಿಗೆ ಚೂರಿ ಇರಿದ ಆರೆಸ್ಸಿಗರು, ಮಹಾತ್ಮ ಗಾಂಧಿಯ ಹತ್ಯೆಯೊಂದಿಗೆ ಸ್ವತಂತ್ರ ಭಾರತದಲ್ಲಿ ಮೊದಲ ಭಯೋತ್ಪಾದನಾ ಕೃತ್ಯ ನಡೆಸಿದರು. ಗಾಂಧೀಜಿಯ ಅಹಿಂಸೆ ಗೆಲ್ಲಬೇಕಾದರೆ ಗೋಡ್ಸೆವಾದಿಗಳ ಹಿಂಸೆಯ ಸಿದ್ದಾಂತವನ್ನು ಭಾರತೀಯರು ಒಂದಾಗಿ ಸೋಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.


ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಟ್ವೀಟ್ ಮಾಡಿ, ಗಾಂಧಿ ಹತ್ಯೆ ದೇಶದ ಮೊದಲ ಭಯೋತ್ಪಾದನಾ ಕೃತ್ಯ. ಗಾಂಧಿಯ ಹಂತಕರು ದೇಶದ ಹಂತಕರು ಎಂದು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version