Home ಟಾಪ್ ಸುದ್ದಿಗಳು ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಮರ ಮೇಲೆ ಹಲ್ಲೆ ಹೆಚ್ಚಳ: ಸಿಪಿಎಂ ಪಾಲಿಟ್‌ ಬ್ಯೂರೊ

ಚುನಾವಣೆ ಫಲಿತಾಂಶ ಬಳಿಕ ಮುಸ್ಲಿಮರ ಮೇಲೆ ಹಲ್ಲೆ ಹೆಚ್ಚಳ: ಸಿಪಿಎಂ ಪಾಲಿಟ್‌ ಬ್ಯೂರೊ

ನವದೆಹಲಿ: ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ಬಳಿಕ ಮುಸ್ಲಿಮರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ. ಹಿಂದುತ್ವ ಕೋಮುವಾದಿ ಪಡೆಗಳು ತಮ್ಮ ದಾಳಿ ಯತ್ನವನ್ನು ಚುರುಕುಗೊಳಿಸಿವೆ ಎಂದು ಸಿಪಿಎಂ ಪಕ್ಷದ ಪಾಲಿಟ್‌ ಬ್ಯೂರೊ ಹೇಳಿಕೆಯಲ್ಲಿ ತಿಳಿಸಿದೆ.

ರಾಯಪುರ, ಅಲಿಘಡ ಮಂಡಲ, ಅಕ್ಬರ್‌ನಗರ, ವಡೋದರ, ನಹಾನ್‌ನಲ್ಲಿ ಮುಸ್ಲಿಮರನ್ನು ಗುರಿಯಾಯಾಗಿಸಿ ನಡೆದ ಹಲ್ಲೆ ಕೃತ್ಯಗಳನ್ನು ಪಕ್ಷ ಉಲ್ಲೇಖಿಸಿದೆ.

ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿ ಜಾನುವಾರು ಒಯ್ಯುತ್ತಿದ್ದ ಮೂವರು ಮುಸ್ಲಿಮರನ್ನು ಗೋವು ಕಳ್ಳಸಾಗಣೆದಾರರು ಎಂದು ಬಿಂಬಿಸಿ ಹತ್ಯೆ ಮಾಡಲಾಗಿತ್ತು. ಅಲಿಘಡದಲ್ಲಿ ಕಳ್ಳ ಎಂದು ಭಾವಿಸಿ ಮುಸ್ಲಿಂ ಯುವಕರ ಕೊಲೆ ಮಾಡಲಾಗಿತ್ತು. ಮಧ್ಯಪ್ರದೇಶದ ಮಂಡಲದಲ್ಲಿ ಮನೆಯೊಂದರ ರೆಫ್ರಿಜರೇಟರ್‌ನಲ್ಲಿ ‘ಗೋಮಾಂಸ’ ಕಂಡುಬಂದ ವರದಿಯನ್ನು ಆಧರಿಸಿ 11 ಮನೆಗಳನ್ನು ನೆಲಸಮಗೊಳಿಸಲಾಗಿತ್ತು.

ಗುಜರಾತ್‌ನಲ್ಲಿ ಸಿ.ಎಂ ವಸತಿ ಯೋಜನೆಯಡಿ ಮುಸ್ಲಿಂ ಮಹಿಳೆಯೊಬ್ಬರಿಗೆ ವಸತಿ ಹಂಚಿಕೆ ಪ್ರತಿಭಟಿಸಿ ಹಿಂದೂಗಳು ಒಟ್ಟಾಗಿ ಪ್ರತಿಭಟಿಸಿದ್ದರು ಎಂಬ ಘಟನೆಯನ್ನು ಪಕ್ಷ ಉಲ್ಲೇಖಿಸಿದೆ.

ಬಿಜೆಪಿ ಮತ್ತು ಇತರೆ ಕೋಮುವಾದಿ ಸಂಘಟನೆಗಳು ನಡೆಸುತ್ತಿರುವ ಇಂಥ ಕೃತ್ಯಗಳ ಬಗ್ಗೆ ಜಾಗೃತರಾಗಿರಬೇಕು. ತಕ್ಷಣ ಇಂಥ ಕೃತ್ಯಗಳನ್ನು ವಿರೋಧಿಸಿ ಪ್ರತಿಭಟನೆ ಜಾಥಾ ಆಯೋಜಿಸಬೇಕು ಎಂದು ಪಾಲಿಟ್‌ ಬ್ಯೂರೊ, ತನ್ನ ಘಟಕಗಳಿಗೆ ತಿಳಿಸಿದೆ.

Join Whatsapp
Exit mobile version