ಕುಶಾಲನಗರ : ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಅವರಿಗೆ ಕೆನಡ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ವೈಎಂಸಿಎ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಡಿಸೋಜಾರಿಗೆ ನೀಡಿ ಸನ್ಮಾನಿಸಲಾಯಿತು. ಒಟ್ಟು 56 ಸಾಧಕರಿಗೆ ಈ ಡಾಕ್ಟರೇಟ್ ಪದವಿಯನ್ನು ನೀಡಲಾಗಿದ್ದು, ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದ ಕೆನಡಾ ವಿಶ್ವವಿದ್ಯಾಲಕ್ಕೆ ಫ್ರಾನ್ಸಿಸ್ ಡಿಸೋಜ ಧನ್ಯವಾದ ಸಮರ್ಪಿಸಿದ್ದಾರೆ.
ಈ ಪ್ರಶಸ್ತಿಯನ್ನು ಕೊಡಗಿನ ಎಲ್ಲ ಜನರಿಗೂ ಹಾಗೂ ಕರವೇ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡರಿಗೆ ಸಮರ್ಪಿಸುತ್ತಿದ್ದೇನೆ ಮತ್ತು ಕೊಡಗಿನ ಕರವೇಯ ಎಲ್ಲಾ ಕಾರ್ಯಕರ್ತರಿಗೂ ಪದಾಧಿಕಾರಿಗಳಿಗೂ ಗೋಪಾಲಪುರ ಚರ್ಚ್ ನ ಎಲ್ಲ ಕ್ರೈಸ್ತ ಬಾಂಧವರಿಗೆ ಈ ಗೌರವ ಡಾಕ್ಟರೇಟ್ ಸಮರ್ಪಿಸುತ್ತಿದ್ದೇನೆ. ಹಾಗೂ ನನ್ನ ಸೋಮವಾರಪೇಟೆ ತಾಲ್ಲೂಕಿನ ಎಲ್ಲಾ ಕರವೇ ಕಾರ್ಯಕರ್ತರಿಗೆ ಅಧ್ಯಕ್ಷರು ಗಳಿಗೂ ಹಾಗೂ ಪದಾಧಿಕಾರಿಗಳಿಗೂ ಈ ಗೌರವ ಡಾಕ್ಟರೇಟ್ ಅನ್ನು ಸಮರ್ಪಿಸುತ್ತಿದ್ದೇನೆ ಎಂದು ಫ್ರಾನ್ಸಿಸ್ ಡಿಸೋಜ ತಿಳಿಸಿದ್ದಾರೆ.