Home ಟಾಪ್ ಸುದ್ದಿಗಳು ಬೆಳ್ಳಂಬೆಳಗ್ಗೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ

ಬೆಳ್ಳಂಬೆಳಗ್ಗೆ ಬಸ್ ನಿಲ್ದಾಣದಲ್ಲಿ ಪೊಲೀಸ್ ಪೇದೆ ಮಗನ ಬರ್ಬರ ಕೊಲೆ

ಕಲಬುರಗಿ: ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಪೇದೆಯೊಬ್ಬರ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.


ವಿದ್ಯಾನಗರ ನಿವಾಸಿ, 27 ವರ್ಷದ ಅಭಿಷೇಕ್ ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಈತನ ತಂದೆ ಚಂದ್ರಕಾಂತ ಪೊಲೀಸ್ ಪೇದೆಯಾಗಿದ್ದಾರೆ.


ಅಭಿಷೇಕ್ ಎಂದಿನಂತೆ ಗುರುವಾರ ಜಿಮ್ ಗೆ ಹೋಗುವುದಾಗಿ ಮನೆಯಿಂದ ಬೈಕ್ ತೆಗೆದುಕೊಂಡು ಬಂದಿದ್ದಾನೆ. ಈ ವೇಳೆ ಏಳೆಂಟು ಜನರ ದುಷ್ಕರ್ಮಿಗಳ ತಂಡ ಆತನನ್ನು ಬೆನ್ನಟ್ಟಿದೆ. ಮುಖ್ಯರಸ್ತೆಯಿಂದಲೇ ದುಷ್ಕರ್ಮಿಗಳು ಬೆನ್ನಟ್ಟಿದ್ದರಿಂದ ಬಸ್ ನಿಲ್ದಾಣದೊಳಗೆ ಅಭಿಷೇಕ್ ಓಡಿ ಬಂದಿದ್ದಾನೆ.


ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಎಸಿಪಿ ಅಂಶಕುಮಾರ, ಇನ್ ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಬೇಟಿ ನೀಡಿದರು. ಅಶೋಕ್ ನಗರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version