ಬೆಂಗಳೂರು: ಹಿಂದುತ್ವವು ಕೊಲೆ, ಹಿಂಸೆ, ತಾರತಮ್ಯವನ್ನು ಹೆಚ್ಚಿಸುತ್ತದೆ. ನಾನೂ ಹಿಂದೂ, ಆದರೆ ಇಂತಹ ಹಿಂದುತ್ವ ಮತ್ತು ಮನವಾದವನ್ನು ವಿರೋಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಲ್ಲಿ ಅವರು ಕಾಂಗ್ರೆಸ್ ಶಾಸಕ ಬಿ. ಆರ್. ಪಾಟೀಲರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಹಿಂದುತ್ವವು ಸಂವಿಧಾನ ವಿರೋಧಿ ಎಂದೂ ಅವರು ಹೇಳಿದರು.
ಯಾವುದೇ ಧರ್ಮವು ಕೊಲೆ, ಹಿಂಸೆ, ತಾರತಮ್ಯವನ್ನು ಹೇಳುವುದಿಲ್ಲ. ಆದರೆ ಈ ಹಿಂದುತ್ವದವರು ಇಂತಹವುಗಳ ಬಗ್ಗೆ ಪ್ರತಿಪಾದಿಸುತ್ತಾರೆ. ಹಿಂದೂವಾಗಿ ಅಯೋಧ್ಯೆಯ ರಾಮ ಮಂದಿರವನ್ನು ವಿರೋಧಿಸುವುದಿಲ್ಲವಾದರೂ ಅದಕ್ಕೆ ನಡೆದಿರುವ ಹಿಂದುತ್ವ ರಾಜಕೀಯವನ್ನು ನಾನು ವಿರೋಧಿಸುತ್ತೇನೆ ಎಂದೂ ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಕಲಬುರಗಿ ಜಿಲ್ಲೆಯವರಾದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣರನ್ನು ಸಿದ್ದರಾಮಯ್ಯನವರು ಖಂಡಿಸಿ, ಅವನೊಬ್ಬ ಮೂರ್ಖ, ಆತನಿಗೆ ಆಡು ಯಾವುದು, ದನ ಯಾವುದು ಎಂದು ಗೊತ್ತಿಲ್ಲ ಎಂದು ಹೇಳಿದರು.
ಆಪರೇಶನ್ ಕಮಲ, ಪ್ರತಿ ಶಾಸಕನಿಗೆ 15ರಿಂದ 20 ಕೋಟಿ ಬೆಲೆ, ಈ ಬಿಜೆಪಿಯವರು ಪ್ರಜಾಪ್ರಭುತ್ವನ್ನು ಹಾಳು ಮಾಡುವವರು. ನಾನು 2013ರಲ್ಲಿ ಕೊಟ್ಟ 158 ಆಶ್ವಾಸನೆ ಈಡೇರಿಸಿದ್ದಲ್ಲದೆ 30 ಹೊಸ ಕಾರ್ಯಕ್ರಮಗಳನ್ನು ಕೊಟ್ಟೆ. ಬಿಜೆಪಿಯವರು 2018ರಲ್ಲಿ 600 ಆಶ್ವಾಸನೆಗಳನ್ನು ಕೊಟ್ಟು ಅದರಲ್ಲಿ 30 ಶೇಕಡಾದಷ್ಟು ಮಾತ್ರ ಈಡೇರಿಸಿದ್ದಾರೆ ಎಂದೂ ಸಿದ್ದರಾಮಯ್ಯನವರು ಟೀಕಾಪ್ರಹಾರ ನಡೆಸಿದರು.