ದೆಹಲಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಇಡಿ ಅಮಾನತುಲ್ಲಾ ಖಾನ್ ಅವರ ಮನೆಗೆ ಇಂದು ಮುಂಜಾನೆ 6 ಗಂಟೆಗೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದೆ.
ನನ್ನ ಬಂಧನ ಮಾಡುವ ಉದ್ದೇಶದಿಂದಲೇ ನನ್ನ ನಿವಾಸದ ಮೇಲೆ ದಾಳಿ ಮಾಡಲಾಗಿದೆ ಎಂದು ಅಮಾನತುಲ್ಲಾ ಖಾನ್ ದಾಳಿ ಬಳಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.