Home ಟಾಪ್ ಸುದ್ದಿಗಳು ಸಿಎಂ, ಡಿಎಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ: ಪ್ರಿಯಾಂಕ್ ಖರ್ಗೆ

ಸಿಎಂ, ಡಿಎಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಸಿಎಂ, ಡಿಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲಿಯೇ ಕೇಳಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಹುದ್ದೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದ್ರೆ ಎಲ್ಲಿ ಕೇಳಬೇಕು, ಅಲ್ಲೇ ಕೇಳಬೇಕು. ಮಾಧ್ಯಮಗಳ ಮುಂದೆ ಕೇಳಿದ್ರೆ ಆಗಲ್ಲ ಎಂದಿದ್ದಾರೆ.

ಬೀದಿಯಲ್ಲಿ ಬಂದು ಜಗಳ ಆಡೋದು ಸರಿಯಲ್ಲ, ನಮ್ಮ ಅಭಿಪ್ರಾಯವನ್ನ ಬೀದಿಯಲ್ಲಿ ಚರ್ಚೆ ಮಾಡೋದು ಸರಿಯಲ್ಲ. ಈ ರೀತಿ ನಾವು ಮಾತಾಡಿಕೊಂಡು ಹೋದ್ರೆ ನಮ್ಮ ಕಾರ್ಯಕರ್ತರಿಗೆ ಏನು ಸಂದೇಶ ಕೊಟ್ಟ ಹಾಗೆ ಆಗುತ್ತೆ? ಸಮುದಾಯದ ಹಿರಿಯರು, ನಾಯಕರಿರಬಹುದು ಎಲ್ಲರೂ ಹೈಕಮಾಂಡ್‌ ಬಳಿ ಕೇಳಬೇಕು ಎಂದು ಸಲಹೆ ನೀಡಿದ್ದಾರೆ.

Join Whatsapp
Exit mobile version