Home ಆರೋಗ್ಯ ಬಾಯಿಯ ದುರ್ವಾಸನೆಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು

ಬಾಯಿಯ ದುರ್ವಾಸನೆಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು

ಸುಂದರವಾಗಿ ಕಾಣಲು ಮುಖದ ಜೊತೆಗೆ ಹಲ್ಲುಗಳು ಕೂಡ ಬಹಳ ಮುಖ್ಯ. ಅನೇಕ ಜನರು ಸಾಮಾನ್ಯವಾಗಿ ಹಳದಿ ಹಲ್ಲುಗಳು ಮತ್ತು ಕೆಟ್ಟ ಬಾಯಿ ವಾಸನೆಗೊಳಗಾಗುತ್ತಾರೆ.

ದಿನನಿತ್ಯ ಹಲ್ಲುಜ್ಜಿದರೂ ಬಾಯಿ ದುರ್ವಾಸನೆ ಬರುತ್ತಿದೆ ಎಂದು ದೂರುತ್ತಾರೆ. ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವು ಮನೆಮದ್ದುಗಳ ಮೂಲಕ ನಿಮ್ಮ ಬಾಯಿ ದುರ್ವಾಸನೆ ದೂರ ಮಾಡಬಹುದು.

ಬಾಯಿ ವಾಸನೆಗೆ ಕಾರಣಗಳು

ಬಾಯಿಯ ಶುಚಿತ್ವ ಇಲ್ಲದೆ ಇರುವುದು: ಬಾಯಿಯನ್ನು ಸರಿಯಾಗಿ ಬ್ರಶ್ ಮಾಡದೆ ಮತ್ತು ಬಾಯಿ ಮುಕ್ಕಳಿಸದೆ ಇರುವುದರಿಂದ ಆಹಾರದ ಕಣಗಳು ಮತ್ತು ಬ್ಯಾಕ್ಟೀರಿಯಾವು ನಾಲಗೆ ಮತ್ತು ಹಲ್ಲುಗಳಲ್ಲಿ ಜಮೆ ಆಗುವುದು.
ಇದರಿಂದ ಬ್ಯಾಕ್ಟೀರಿಯಾವು ಅಳಿದುಳಿದ ಆಹಾರವನ್ನು ಕೊಳೆಯುವಂತೆ ಮಾಡಿ, ವಾಸನೆಯ ಸಲ್ಫರ್ ಬಿಡುಗಡೆ ಮಾಡುವ ಕಾರಣದಿಂದಾಗಿ ಬಾಯಿಯಲ್ಲಿ ದುರ್ವಾಸನೆಯು ಬರುವುದು.

ತಡೆಯಲು ಮನೆ ಮದ್ದು

ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೆ, ಆಗ ಇದರಿಂದ ಜೊಲ್ಲು ಉತ್ಪತ್ತಿ ಆಗುವುದು. ಇದರಿಂದ ಬಾಯಿಯು ನೈಸರ್ಗಿಕವಾಗಿ ಶುಚಿಯಾಗಿ, ಬ್ಯಾಕ್ಟೀರಿಯಾವನ್ನು ತೊಡೆದು ಹಾಕುವುದು.

ದಿನವಿಡಿ ನೀರು ಕುಡಿಯುತ್ತಲಿದ್ದರೆ, ಆಗ ಇದರಿಂದ ಬಾಯಿಯಲ್ಲಿ ದ್ರವಾಂಶವು ಇರುವುದು ಮತ್ತು ಇದು ಬ್ಯಾಕ್ಟೀರಿಯಾವನ್ನು ತಡೆಯುವುದು. ಇದರಿಂದ ಬಾಯಿಯ ಆರೋಗ್ಯವು ಉತ್ತಮವಾಗಿ, ವಾಸನೆಯನ್ನು ತಡೆಯುವುದು.

ದಿನದಲ್ಲಿ ಎರಡು ಸಲ ಎರಡು ನಿಮಿಷ ಕಾಲ ಹಲ್ಲುಗಳಿಗೆ ಬ್ರಶ್ ಮಾಡಿದರೆ, ಆಗ ಅದು ನಾಲಗೆ ಸಹಿತ ಎಲ್ಲವನ್ನು ಶುಚಿಯಾಗಿಡುವುದು.
ಬಾಯಿಯಲ್ಲಿ ಇರುವ ಆಹಾರದ ಕಣಗಳನ್ನು ಹೊರಗೆ ಹಾಕಲು ಊಟ ಮಾಡಿದ ಬಳಿಕ ಬಾಯಿಯನ್ನು ಸರಿಯಾಗಿ ಮುಕ್ಕಳಿಸಿಕೊಳ್ಳಿ. ಇದರಿಂದ ಬ್ಯಾಕ್ಟೀರಿಯಾ ನಿರ್ವಹಣೆ ಮಾಡಬಹುದು ಮತ್ತು ಬಾಯಿಯಿಂದ ಕೀಟಾಣುಗಳನ್ನು ದೂರವಿಡಬಹುದು.

ವಿಟಮಿನ್ ಹಾಗೂ ಖನಿಜಾಂಶಗಳು ಇರುವ ಆಹಾರಗಳನ್ನು ಸೇವನೆ ಮಾಡಿದರೆ, ಆಗ ಇದು ಬಾಯಿಯ ಆರೋಗ್ಯಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುವುದು.
ಅಧಿಕ ನಾರಿನಾಂಶವು ಇರುವ ಹಣ್ಣುಗಳು ಮತ್ತು ತರಕಾರಿಗಳು ಕೂಡ ಬಾಯಿಯಲ್ಲಿ ಲಾಲಾರಸವನ್ನು ಹೆಚ್ಚಿಸಬಹುದು.

ಶುಂಠಿ ಮತ್ತು ಉಪ್ಪು: ಶುಂಠಿ ಮತ್ತು ಉಪ್ಪನ್ನು ಬಳಸಿ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು. ಇದಕ್ಕಾಗಿ ನೀರಿಗೆ ಶುಂಠಿ ಮತ್ತು ಉಪ್ಪನ್ನು ಸೇರಿಸಿ ಬಿಸಿ ಮಾಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ

Join Whatsapp
Exit mobile version