Home ಟಾಪ್ ಸುದ್ದಿಗಳು NDTV ಯನ್ನು ಹೊರಗಿಟ್ಟು ವಿವಾದ ಸೃಷ್ಟಿಸಿದ ಹಾತ್ ವೇ ಕೇಬಲ್ ನೆಟ್ ವರ್ಕ್

NDTV ಯನ್ನು ಹೊರಗಿಟ್ಟು ವಿವಾದ ಸೃಷ್ಟಿಸಿದ ಹಾತ್ ವೇ ಕೇಬಲ್ ನೆಟ್ ವರ್ಕ್

ಹೊಸದಿಲ್ಲಿ : ಪ್ರಖ್ಯಾತ ಟಿ.ವಿ ಚಾನೆಲ್ NDTV ಯನ್ನು ಹಾತ್ ವೇ ಕೇಬಲ್ ಆ್ಯಂಡ್ ಡಾಟ್ ಕಾಂ ಲಿಮಿಟೆಡ್‌ನಿಂದ ತೆಗೆದು ಹಾಕಿರುವ ಬಗ್ಗೆ ಹಿರಿಯ ಪತ್ರಕರ್ತ ಮತ್ತು ಎನ್‌ಡಿಟಿವಿ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. NDTV ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಷೇರ್ ಮಾಡಿರುವ ವಿಡಿಯೊದಲ್ಲಿ, ವಾಹಿನಿಯನ್ನು ಮೂಲೆಗುಂಪು ಮಾಡುವ ಮತ್ತು ವಾಹಿನಿ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ತಲುಪದಂತೆ ಮಾಡುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದ್ದಾರೆ.

NDTV ತಂಡ ಪ್ರೇಕ್ಷಕರಿಗಾಗಿ ಪ್ರೈಮ್‌ಟೈಮ್ ಶೋ ರೂಪಿಸಲು ಹೇಗೆ ಅವಿರತವಾಗಿ ಶ್ರಮಿಸುತ್ತಿದೆ ಮತ್ತು ಈ ಕಾರ್ಯತಂತ್ರದ ಭಾಗವಾದ ಪಿತೂರಿ ರೂಪಿಸಿ ಈ ಪ್ರಯತ್ನಗಳನ್ನು ಹಾಗೂ ವಾಹಿನಿಯನ್ನು ಹತ್ತಿಕ್ಕಲು ಯಾವ ಪ್ರಯತ್ನಗಳು ನಡೆಯುತ್ತಿವೆ ಎಂದೂ ವಿವರಿಸಿದ್ದಾರೆ.ಇತರ ಸುದ್ದಿ ವಾಹಿನಿಗಳ ಮೇಲೆ ವಾಗ್ದಾಳಿ ನಡೆಸಿರುವ ಅವರು, ಎನ್‌ಡಿಟಿವಿ ಜನರಿಗೆ ಸತ್ಯವನ್ನು ತಲುಪಿಸಲು ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ತಮ್ಮ ತಂಡ ಪ್ರಯತ್ನವನ್ನು ಮುಂದುವರಿಸಲಿದ್ದು, ತಮ್ಮನ್ನು ಮೂಲೆಗುಂಪು ಮಾಡುವಂಥ ಇಂಥ ಪ್ರಯತ್ನಗಳಿಂದ ಧೈರ್ಯ ಕಳೆದುಕೊಳ್ಳುವುದಿಲ್ಲ. ಹಾತ್‌ವೇ ಕೇಬಲ್ ಕಂಪನಿಯ ವಿರುದ್ಧ ಸಿಡಿದೇಳಬೇಕು ಎಂದು ಜನರಿಗೆ ಕರೆ ನೀಡಿರುವ ಅವರು, ಕಂಪೆನಿಯ ಸಂಖ್ಯೆ 1800 4197 900; 0120 6836401ಗೆ ಕರೆ ಮಾಡಿ ಮತ್ತು ಕಂಪೆನಿಯ ಅಧಿಕೃತ ಹ್ಯಾಂಡಲ್‌ @HathwayCableTVಗೆ ಟ್ಯಾಗ್ ಮಾಡಿ ಎನ್‌ಡಿಟಿವಿಯನ್ನು ತನ್ನ ಜಾಲದಲ್ಲಿ ಪುನಸ್ಥಾಪಿಸುವಂತೆ ಟ್ವೀಟ್ ಮಾಡಬೇಕು ಎಂದು ಕೋರಿದ್ದಾರೆ

Join Whatsapp
Exit mobile version