Home ಕರಾವಳಿ SDPI ದ.ಕ ಜಿಲ್ಲಾ ನಿಯೋಗದಿಂದ ಸಜೀಪ ನಡುವಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ

SDPI ದ.ಕ ಜಿಲ್ಲಾ ನಿಯೋಗದಿಂದ ಸಜೀಪ ನಡುವಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ

ಸಜೀಪ ನಡು:ಎಸ್ ಡಿಪಿಐ ದ.ಕ ಜಿಲ್ಲಾ ನಿಯೋಗದ ವತಿಯಿಂದ ಸತತವಾಗಿ ಎರಡನೇ ಬಾರಿ ಆಯ್ಕೆಯಾದ ಸಜೀಪ ನಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಪಕ್ಷದ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ರವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಜನ ಸಾಮಾನ್ಯರ ಕುಂದು ಕೊರತೆಗಳ ಅಹವಾಲುಗಳನ್ನು ಆಲಿಸಿ ತುರ್ತು ಸ್ಪಂದಿಸಬೇಕಾಗಿರುವ ಕೆಲಸಗಳ ಬಗ್ಗೆ ಗಮನಹರಿಸುವಂತೆ ಹಾಗೂ ಸರಕಾರಿ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸುವಂತೆ ಸಜೀಪ ನಡು ಗ್ರಾ.ಪಂ ಅಧ್ಯಕ್ಷೆ ಪೌಝಿಯಾ ಭಾನು , ಉಪಾದ್ಯಕ್ಷ SN ಇಕ್ಬಾಲ್ ಮತ್ತು ಗ್ರಾ.ಪಂ ಸದಸ್ಯರಿಗೆ ಸೂಚಿಸಲಾಯಿತು.

ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ SH ಅಶ್ರಫ್ ಮಂಚಿ ಜಿಲ್ಲಾ ಕಾರ್ಯದರ್ಶಿ ಮತ್ತು ಝಕರಿಯ ಗೋಳ್ತಮಜಲ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಜೀಪ ನಡು ಗ್ರಾಮ ಪಂಚಾಯತ್ ಸದಸ್ಯರಾದ ನಾಸಿರ್ ಸಜೀಪ , ಇಸ್ಮಾಯಿಲ್ ಗೊಳಿಪಡ್ಪು ಸವಿತಾ ಡಿಸೋಝ, ಬೀಫಾತಿಮ,ಹಾಗೂ ನೌಶಾದ್ ಸಜಿಪ ಹಾಗು ಮಾಜಿ ಸದಸ್ಯರಾದ ರಶೀದ್ ಸಜೀಪ ಸೇರಿದಂತೆ SDPI ಸಜೀಪ ನಡು ವಿನ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.

Join Whatsapp
Exit mobile version