ಲೋಕಾಯುಕ್ತ ದಾಳಿ: ಇಬ್ಬರು ಅಧಿಕಾರಿಗಳ ಬಂಧನ

Prasthutha|

ವಿಜಯಪುರ: ಲೋಕಾಯುಕ್ತ ಅಧಿಕಾರಿಗಳು ಶನಿವಾರ ಏಕಕಾಲಕ್ಕೆ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ದಾಳಿ ಮಾಡಿದ್ದು, ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -


ವಿಜಯಪುರದ ಸರ್ವೆಯರ್ ಮಲ್ಲಪ್ಪ ಜಂಬಗಿ ಮತ್ತು ಕಲಬುರಗಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಫ್ ಡಿಎ ಶಿವಶಂಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಜಯಪುರದ ಸರ್ವೆಯರ್ ಮಲ್ಲಪ್ಪ ಜಂಬಗಿ ಮತ್ತು ಸಹಾಯಕ ಗುರುದತ್ತ ಬಿರಾದಾರ ಜಮೀನಿನ ತಾತ್ಕಾಲಿಕ ಪೋಡಿ ಮಾಡಲು ಪ್ರಕಾಶ್ ಸಿಂಗೆ ಎಂಬುವರಿಂದ 47,500 ರೂ. ಲಂಚ ಪಡೆಯುತ್ತಿದ್ದರು. ಈ ವಿಚಾರ ತಿಳಿದ ಲೋಕಾಯುಕ್ತ ಎಸ್ಪಿ ಮಲ್ಲೇಶ, ಡಿಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕನವರ್ ಮತ್ತು ಆನಂದ ದೋಣಿ ನೇತೃತ್ವದ ತಂಡ ಧಿಡೀರನೆ ದಾಳಿ ಮಾಡಿ, ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.


ಇನ್ನು ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಫ್ಡಿಎ ಶಿವಶಂಕರ ಎಸ್ಎಸ್ಎಲ್ಸಿ ಅಂಕಪಟ್ಟಿ ನಕಲು ಪತ್ರಿ ನೀಡಲು ಅರುಣ್ ಖತೀಬ್ ಎಂಬುವರಿಂದ ಐದು ಸಾವಿರ ಹಣ ಪಡೆಯುತ್ತಿದ್ದರು. ಈ ವಿಚಾರ ತಿಳಿದು ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಮತ್ತು ಡಿವೈಎಸ್ಪಿ ಗೀತಾ ಬೇನಾಳ್ ನೇತೃತ್ವದ ತಂಡ ದಾಳಿ ಮಾಡಿ ಅಧಿಕಾರಿಯನ್ನು ಬಂಧಿಸಿದ್ದಾರೆ.

Join Whatsapp
Exit mobile version