Home ಕ್ರೀಡೆ ಟಿ-20 ವಿಶ್ವಕಪ್’ನಲ್ಲಿ ವನಿಂದು ಹಸರಂಗ ವಿಶ್ವದಾಖಲೆ

ಟಿ-20 ವಿಶ್ವಕಪ್’ನಲ್ಲಿ ವನಿಂದು ಹಸರಂಗ ವಿಶ್ವದಾಖಲೆ

ಅಬುಧಾಬಿ : ಐಸಿಸಿ ಟಿ-20 Ranking ನಲ್ಲಿ ನಂ.1 ಬೌಲರ್ ಸ್ಥಾನಕ್ಕೇರಿದ ಬೆನ್ನಲ್ಲೇ, ಶ್ರೀಲಂಕಾದ ಸ್ಪಿನ್ ಸೆನ್ಸೇಶನ್ ವನಿಂದು ಹಸರಂಗ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ವಿಶ್ವದಾಖಲೆ ಬರೆದಿದ್ದಾರೆ.
ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಡೈನ್ ಬ್ರಾವೋ ವಿಕೆಟ್ ಪಡೆಯುವ ಮೂಲಕ ಹಸರಂಗ, ಟಿ-20 ವಿಶ್ವಕಪ್’ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ತನ್ನದಾಗಿಸಿಕೊಂಡರು.


ಸೂಪರ್ 12 ಹಂತದಲ್ಲಿ 5 ಪಂದ್ಯಗಳನ್ನಾಡಿರುವ ವನಿಂದು ಹಸರಂಗ, ಒಟ್ಟು 16 ವಿಕೆಟ್’ಗಳನ್ನು ಪಡೆಯುವ ಮೂಲಕ, ತಮ್ಮದೇ ತಂಡದ ಮಾಜಿ ಬೌಲರ್ ಅಜಂತ ಮೆಂಡಿಸ್ ಹೆಸರಲ್ಲಿದ್ದ (15 ವಿಕೆಟ್) ದಾಖಲೆಯನ್ನು ತನ್ನದಾಗಿಸಿಕೊಂಡರು. 2012ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಜಂತ ಮೆಂಡಿಸ್ 15 ವಿಕೆಟ್’ಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಕೊಲಂಬೋದಲ್ಲಿ ನಡೆದ ಅದೇ ಟೂರ್ನಿಯ ಫೈನಲ್’ನಲ್ಲಿ ಲಂಕಾ ತಂಡವನ್ನು ಅವರದ್ದೇ ತವರಿನಲ್ಲೇ ಮಣಸಿ ವೆಸ್ಟ್ ಇಂಡೀಸ್ ಚಾಂಪಿಯನ್ ಪಟ್ಟಕ್ಕೇರಿತ್ತು.


ಗುರುವಾರ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ, ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು 20 ರನ್’ಗಳ ಅಂತರದಲ್ಲಿ ಸೋಲಿಸಿತ್ತು. ಈ ಪಂದ್ಯದಲ್ಲಿ ವನಿಂದು ಹಸರಂಗ 19 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಶೇಕ್ ಝಾಯೆದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬೌಲ್ ಮಾಡಿದ್ದ ಬೆಸ್ಟ್ ಇಂಡೀಸ್, ಲಂಕಾ ಬ್ಯಾಟರ್’ ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ನಿಗದಿ 20 ಓವರ್’ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಶ್ರೀಲಂಕಾ 189 ರನ್’ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟುವ ವೇಳೆ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟದಲ್ಲಿ 169 ರನ್’ಗಳಿಸಲಷ್ಟೇ ಸಾಧ್ಯವಾಯಿತು. ಈ ಸೋಲಿನ ಮೂಲಕ ಸೆಮಿಫೈನಲ್ ರೇಸ್’ನಿಂದಲೂ ವೆಸ್ಟ್ ಇಂಡೀಸ್ ಹೊರಬಿದ್ದಿದೆ.

Join Whatsapp
Exit mobile version