Home ಕ್ರೀಡೆ ಅಜೀಮ್ ರಫೀಕ್ ವಿರುದ್ಧದ ಜನಾಂಗೀಯ ನಿಂದನೆ ಆರೋಪ ಸಾಬೀತು: ಯಾರ್ಕ್ ಶೈರ್’ಗೆ ಸಂಕಷ್ಟ

ಅಜೀಮ್ ರಫೀಕ್ ವಿರುದ್ಧದ ಜನಾಂಗೀಯ ನಿಂದನೆ ಆರೋಪ ಸಾಬೀತು: ಯಾರ್ಕ್ ಶೈರ್’ಗೆ ಸಂಕಷ್ಟ

ಯಾರ್ಕ್ ಶೈರ್ : ಇಂಗ್ಲೆಂಡ್’ನ ಕೌಂಟಿ ಕ್ರಿಕೆಟ್’ನಲ್ಲಿ ಕೇಳಿಬಂದಿದ್ದ ಜನಾಂಗೀಯ ನಿಂದನೆ ಆರೋಪವು ಸ್ವತಂತ್ರ ತನಿಖೆಯಲ್ಲಿ ಸಾಬೀತಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ. ಸ್ವತಂತ್ರ ಸಮಿತಿಯ ತೀರ್ಪು ಹೊರಬೀಳುತ್ತಲೇ ಯಾರ್ಕ್ ಶೈರ್ ಕ್ಲಬ್’ ನ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಹಟ್ಟನ್ ರಾಜೀನಾಮೆ ನೀಡಿದ್ದಾರೆ.


ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಅಥವಾ ಸ್ಥಳೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುವುದುಕ್ಕೆ ಯಾರ್ಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ’ಗೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತತಕ್ಷಣದಿಂದಲೇ ನಿರ್ಭಂದ ಹೇರಿದೆ. ಇದರ ಬೆನ್ನಲ್ಲೆ ಕ್ಲಬ್;ನ ಪ್ರಾಯೋಜಕತ್ವದಿಂದ ಪ್ರಮುಖ ಕಂಪನಿಗಳು ಹಿಂದೆಸರಿದಿವೆ.


ಏನಿದು ಘಟನೆ ?
2008-18ರ ಅವಧಿಯಲ್ಲಿ ಯಾರ್ಕ್ ಶೈರ್ ತಂಡದ ಸದಸ್ಯನಾಗಿದ್ದ, ಪಾಕಿಸ್ತಾನ ಮೂಲದ ಆಟಗಾರ ಅಜೀಮ್ ರಫೀಕ್ ವಿರುದ್ಧ ಸಹ ಆಟಗಾರ ಗ್ಯಾರಿ ಬ್ಯಾಲೆನ್ಸ್ ಜನಾಂಗೀಯ ನಿಂದನೆ ಮಾಡಿದ್ದರು. ಮುಸ್ಲಿಂ ಆದ ಕಾರಣ ತನ್ನನ್ನು ಹೊರಗಿನವರಂತೆ ನೋಡಿಕೊಳ್ಳಲಾಯಿತು ಎಂದು ಆರೋಪಿಸಿದ್ದರು. ಈ ಕುರಿತು ಇಂಗ್ಲೆಂಡ್ನ ಅಂಡರ್-19 ತಂಡದ ಮಾಜಿ ನಾಯಕನೂ ಆಗಿದ್ದ ಅಜೀಮ್ ರಫೀಕ್, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ದೂರು ನೀಡಿದ್ದರು.


ವಿಚಾರಣೆಯ ವೇಳೆ ಅಜೀಮ್ ರಫೀಕ್ ವಿರುದ್ಧ ಜನಾಂಗೀಯ ನಿಂದನೆ ಮಾಡಿರುವುದನ್ನು ಯಾರ್ಕ್ ಶೈರ್ ಆಟಗಾರ ಗ್ಯಾರಿ ಬ್ಯಾಲೆನ್ಸ್ ತಪ್ಪೊಪ್ಪಿಕೊಂಡಿದ್ದಾರೆ. ರಫೀಕ್ ಮಾಡಿರುವ 43 ಆರೋಪಗಳ ಪೈಕಿ ಸ್ವತಂತ್ರ ಸಮಿತಿಯು ಏಳು ಆರೋಪಗಳನ್ನು ಎತ್ತಿ ಹಿಡಿದಿದೆ. ಅಲ್ಲದೆ ಜನಾಂಗೀಯ ನಿಂದನೆ ಹಾಗೂ ಹಿಂಸೆಗೆ ಒಳಗಾಗಿದ್ದರು ಎಂಬುದು ಸಾಬೀತುಗೊಂಡಿದೆ. ಈ ಸಂಬಂಧ ಬ್ಯಾಲೆನ್ಸ್ ಅವರನ್ನು ಇಂಗ್ಲೆಂಡ್ ಆಯ್ಕೆಯಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ.

ಅಜೀಮ್ ರಫೀಕ್ ಎತ್ತಿರುವ ಆರೋಪಗಳನ್ನು ಯಾರ್ಕ್ ಶೈರ್ ನಿಭಾಯಿಸಿರುವ ರೀತಿ ಸ್ವೀಕಾರಾರ್ಹವಲ್ಲ. ಅಲ್ಲದೆ ಇದರಿಂದಾಗಿ ಕ್ರಿಕೆಟ್ಗೆ ಹಾನಿಯನ್ನುಂಟು ಮಾಡಿದೆ ಎಂಬುದು ಸ್ಪಷ್ಟವಾಗಿದೆ. ಇದು ಕ್ರೀಡಾಸ್ಫೂರ್ತಿ ಹಾಗೂ ಕ್ರಿಕೆಟ್ ನ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಇಸಿಬಿ ಹೇಳಿದೆ.
ಕ್ರಿಕೆಟ್ ನಲ್ಲಿ ಜನಾಂಗೀಯ ನಿಂದನೆ ಅಥವಾ ಭೇದಭಾವಕ್ಕೆ ಯಾವುದೇ ಸ್ಥಾನವಿಲ್ಲ. ಅಲ್ಲದೆ ಈ ಕುರಿತು ಗಮನಕ್ಕೆ ಬಂದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಆಟದ ಮೇಲಿನ ಬದ್ಧತೆಯನ್ನು ಪ್ರದರ್ಶಿಸಬೇಕಾದರೆ ಕಟ್ಟುನಿಟ್ಟಾಗಿ ವ್ಯವಹರಿಸಬೇಕು ಎಂದು ಇಸಿಬಿ ಹೇಳಿದೆ.

Join Whatsapp
Exit mobile version