ಕೇಂದ್ರ ಸರ್ಕಾರ ಕೋವಿಡ್ ಸಾವಿನ ವಿವರಗಳನ್ನು ಮರೆಮಾಚುತ್ತಿದೆ : ರಾಹುಲ್ ಗಾಂಧಿ ಆಕ್ರೋಶ

Prasthutha|

ಹೊಸದಿಲ್ಲಿ: ಕೇಂದ್ರ ಸರ್ಕಾರ ಕೋವಿಡ್ ಸಾವಿನ ಕುರಿತ ದಾಖಲೆಗಳನ್ನು ಮರೆಮಾಚುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಭಾರತ ಸರ್ಕಾರ ಕೋವಿಡ್​ ಸಾವಿನ ನೈಜ ದಾಖಲೆಯನ್ನು ಮರೆಮಾಚುತ್ತಿದೆ ಎಂದು ಮಾಧ್ಯಮ ವರದಿಯೊಂದನ್ನು ಟ್ವೀಟ್​ ಮಾಡಿದ ಅವರು, ಕೇಂದ್ರ ಸರ್ಕಾರ ಕೋವಿಡ್ ಸಾವಿನ ಕುರಿತ ವಿವರಗಳನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದ್ದಾರೆ.

ಕೋವಿಡ್ ನಿಂದ ನಮ್ಮನ್ನು ರಕ್ಷಿಸಲು ಲಸಿಕೆಗಳು ಪ್ರಬಲವಾದ ಅಸ್ತ್ರವಾಗಿದ್ದು, ನೀವೆಲ್ಲರೂ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ವಿತರಿಸುವಂತೆ ಧ್ವನಿ ಎತ್ತಿ ಕೇಂದ್ರ ಸರ್ಕಾರವನ್ನು ಎಚ್ಚರಗೊಳಿಸಬೇಕು’ ಎಂದು ರಾಹುಲ್ #SpeakUpForFreeUniversalVaccination ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಟ್ವೀಟ್​ ಮಾಡಿದ್ದಾರೆ.

Join Whatsapp
Exit mobile version