ನವದೆಹಲಿ : ಯೂಟ್ಯೂಬ್ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿ ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಮತ್ತು ಇತರ ಅಪರಾಧ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಹಿಮಾಚಲಪ್ರದೇಶದ ಬಿಜೆಪಿ ಮುಖಂಡರು ವಿನೋದ್ ದುವಾ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು.
ನ್ಯಾ. ಯು.ಯು. ಲಲಿತ್ ಮತ್ತು ನ್ಯಾ. ವಿನೀತ್ ಶರಣ್ ನ್ಯಾಯಪೀಠ ಈ ತೀರ್ಪು ನೀಡಿದೆ. ಕಳೆದ ವರ್ಷ ಜುಲೈನಲ್ಲಿ, ಈ ಪ್ರಕರಣದಲ್ಲಿ, ಯಾವುದೇ ಬಲವಂತದ ಕ್ರಮದಿಂದ ದುವಾ ಅವರಿಗೆ ರಕ್ಷಣೆ ನೀಡುವಂತೆ ಕೋರ್ಟ್ ಆದೇಶಿಸಿತ್ತು.
ಪ್ರಧಾನಿ ಮೋದಿ ವಿರುದ್ಧ ಯೂಟ್ಯೂಬ್ ಶೋವೊಂದರಲ್ಲಿ ದುವಾ ಕೆಲವು ಆರೋಪಗಳನ್ನು ಮಾಡಿದ್ದಾರೆ ಎಂದು ಶ್ಯಾಮ್ ದುವಾ ವಿರುದ್ಧ ದೂರಿನಲ್ಲಿ ಆರೋಪಿಸಲಾಗಿತ್ತು.