ನಡು ರಸ್ತೆಯಲ್ಲಿಯೇ ಗ್ಯಾಂಗ್‌ವಾರ್‌‌: ಮತ್ತೆ ಮೂವರ ಬಂಧನ

Prasthutha|

ಉಡುಪಿ: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 18ರಂದು ನಡು ರಸ್ತೆಯಲ್ಲಿಯೇ ಮಧ್ಯೆ ನಡೆದ ಗ್ಯಾಂಗ್‌ವಾರ್‌‌ಗೆ ಸಂಬಂಧಿಸಿ ಮತ್ತೆ ಮೂವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಆರಕ್ಕೇರಿದೆ.

- Advertisement -

ಪ್ರಕರಣದಲ್ಲಿ ಈಗಾಗಲೇ ಮೇ 20ರಂದು ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್ (26), ತೋನ್ಸೆ ಹೂಡೆಯ ರಾಕೀಬ್ (21) ಹಾಗೂ ಮೇ 25ರಂದು ಸಕ್ಲೈನ್ (26) ಎಂಬವರನ್ನು ಬಂಧಿಸಲಾಗಿತ್ತು.

ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಮೂವರಲ್ಲಿ ಓರ್ವ ವೈರಲ್ ವಿಡಿಯೋದಲ್ಲಿ ಕಾಣುವ ಕಾರು ಢಿಕ್ಕಿಯಿಂದಾಗಿ ಗಾಯಗೊಂಡ ಶರೀಫ್ ಎಂಬಾತ ಕೂಡ ಇದ್ದಾನೆ. ಈತನಿಗೆ ಗಾಯಗಳಾಗಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version