ಬೆಳಗಾವಿ: ರಸ್ತೆ ಅಪಘಾತ ಸಂಭವಿಸಿ ಎಎಸ್ ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ನಲ್ಲಿ ನಡೆದಿದೆ.
ಕಾರು ಮತ್ತು ಬೈಕ್ ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.
ಬೆಳಗಾವಿ ನಿವಾಸಿ, ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು ಚಾಲಕ ನಿಖಿಲ್ ಕದಂ(24), ಬೈಕ್ ನಲ್ಲಿದ್ದ ವೃದ್ಧೆ ಹನುಮವ್ವಾ ಚಿಕ್ಕಲಕಟ್ಟಿ ಮೃತರು ಎಂದು ತಿಳಿದು ಬಂದಿದೆ.
ಬೆಳಗಾವಿ-ಬಾಗಲಕೋಟೆ ರಸ್ತೆಯ ಬೂದಿಗೊಪ್ಪ ಕ್ರಾಸ್ ನಲ್ಲಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಬೆಳಗಾವಿಯತ್ತ ಬರುತ್ತಿತ್ತು. ಈ ವೇಳೆ ಕಾರು ಮತ್ತು ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು, ಬೈಕ್ ನಲ್ಲಿದ್ದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.