ಕೊಚ್ಚಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಆರ್ಯಾದನ್ ಮುಹಮ್ಮದ್ (87) ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
ಇವರು ಆರೋಗ್ಯ ಸಮಸ್ಯೆಯಿಂದಾಗಿ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
1977ರಲ್ಲಿ ನಿಲಂಬೂರಿನಿಂದ ಮೊದಲ ಬಾರಿಗೆ ವಿಧಾನಸಭೆಗೆ ಗೆದ್ದ ಆರ್ಯಾದನ್ ಮುಹಮ್ಮದ್ ಅವರು 1980, 1987, 1991, 1996, 2001, 2006 ಮತ್ತು 2011 ರಲ್ಲಿ ನಿಲಂಬೂರಿನಿಂದ ಗೆದ್ದು, ಎಂಟು ಬಾರಿ ಶಾಸಕರಾಗಿದ್ದರು. ಮೂರು ಸಚಿವರಾಗಿ ಗುರುತಿಸಿಕೊಂಡಿದ್ದರು.