Home ಟಾಪ್ ಸುದ್ದಿಗಳು ನಸೀನ್ ಸೆಯ್ಯದ್ ಮೊಹಮ್ಮದ್ ಅಲ್ ಹುಸೇನ್ ನಿಧನಕ್ಕೆ ಎಸ್ಡಿಪಿಐ ಸಂತಾಪ

ನಸೀನ್ ಸೆಯ್ಯದ್ ಮೊಹಮ್ಮದ್ ಅಲ್ ಹುಸೇನ್ ನಿಧನಕ್ಕೆ ಎಸ್ಡಿಪಿಐ ಸಂತಾಪ

ಬೆಂಗಳೂರು: ಹಝ್ರತ್ ಸೈಯ್ಯದ್ ಶಾ ಚಂದಾ ಹುಸೇನಿ ದರ್ಗಾ ಶರೀಫ್‌ನ ಸಜ್ಜಾದೇ ನಸೀನ್ ಸೆಯ್ಯದ್ ಮೊಹಮ್ಮದ್ ಅಲ್ ಹುಸೇನ್ ನಿಧನಕ್ಕೆ ಎಸ್ಡಿಪಿಐ ಸಂತಾಪ ಸೂಚಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪಟ್ಟಣದ ಖ್ಯಾತ ದರ್ಗಾ ಶರೀಫ್ ಆದಂತಹ ಹಝ್ರತ್ ಸೈಯ್ಯದ್ ಶಾ ಚಂದಾ ಹುಸೇನಿ ದರ್ಗಾ ಶರೀಫ್‌ನ ಸಜ್ಜಾದೇ ನಸೀನ್ ಧಾರ್ಮಿಕ ಜ್ಞಾನಿಗಳು. ಸಮುದಾಯ ಸ್ನೇಹಿಗಳು, ಜನಪರ ಕಾಳಜಿಯುಳ್ಳವರು, ಸಮಾಜಮುಖಿ ಚಿಂತಕರೀ ಆದಂತಹ ಹಝ್ರತ್ ಸೈಯ್ಯದ್ ಮೊಹಮ್ಮದ್ ಅಲ್ ಹುಸೇನ್ ಅವರು ಅಲ್ಲಾಹನ ಕರೆಗೆ ಓಗೊಟ್ಟು ಮರಣ ಹೊಂದಿದ್ದಾರೆ. ಅವರಿಗೆ ಸೃಷ್ಟಿಕರ್ತನು ಸ್ವರ್ಗದಲ್ಲಿ ಉನ್ನತ ದರ್ಜೆ ನೀಡಲಿ. ಅವರ ಕುಟುಂಬ ವರ್ಗಕ್ಕೆ ಮತ್ತು ಅಪಾರ ಬಂಧು ಬಳಗದವರಿಗೆ, ಹಿತೈಷಿಗಳಿಗೆ ಅವರ ಮರಣದ ದುಃಖವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಿ ಅನುಗ್ರಹಿಸಲಿ ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version