ಕೊಚ್ಚಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಾಯಕರ ಬಂಧನ ಖಂಡಿಸಿ ಕರೆ ನೀಡಲಾಗಿದ್ದ ಕೇರಳ ಹರತಾಳದ ವೇಳೆ ಕೆಎಸ್ ಆರ್ ಟಿಸಿ ಬಸ್ ಗೆ ಕಲ್ಲೆಸೆದ ಸನೂಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹರತಾಳದ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಬಸ್ ಮೇಲೆ ಪಂದಳಂ ಎಂಬಲ್ಲಿ ಸ್ಕೂಟರ್ ನಲ್ಲಿ ಬಂದ ಸನೂಜ್ ಕಲ್ಲೆಸೆದಿದ್ದ. ಘಟನೆಯಿಂದ ಬಸ್ ಗಾಜು ಪುಡಿಪುಡಿಯಾಗಿ ಬಸ್ ಚಾಲಕ ರವೀಂದ್ರ ಅವರ ಕಣ್ಣಿಗೆ ಗಾಯಗಳಾಗಿತ್ತು.
ಸ್ಕೂಟರ್ ಯಾರು ಚಲಾಯಿಸುತ್ತಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.