Home ಟಾಪ್ ಸುದ್ದಿಗಳು ಚೆಕ್ ಬೌನ್ಸ್ ಕೇಸ್: ಕಾಂಗ್ರೆಸ್ ಮಾಜಿ ಶಾಸಕ ಕೆ ವೆಂಕಟಸ್ವಾಮಿಗೆ ಹತ್ತೂವರೆ ಲಕ್ಷ ದಂಡ

ಚೆಕ್ ಬೌನ್ಸ್ ಕೇಸ್: ಕಾಂಗ್ರೆಸ್ ಮಾಜಿ ಶಾಸಕ ಕೆ ವೆಂಕಟಸ್ವಾಮಿಗೆ ಹತ್ತೂವರೆ ಲಕ್ಷ ದಂಡ

ಬೆಂಗಳೂರು: ದೇವನಹಳ್ಳಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಕೆ. ವೆಂಕಟಸ್ವಾಮಿ ಚೆಕ್ ಬೌನ್ಸ್ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಾರಿದೆ. ಜೊತೆಗೆ ಕಾಂಗ್ರೆಸ್ ಶಾಸಕ ವೆಂಕಟಸ್ವಾಮಿಗೆ 10.50 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ 6 ತಿಂಗಳು ಸೆರೆವಾಸದ ಶಿಕ್ಷೆಯನ್ನು ವಿಧಿಸುವುದಾಗಿ ಆದೇಶಿಸಿದೆ.

ನಾಗಭೂಷಣ ಎಂಬುವರು ನೀಡಿದ ಖಾಸಗಿ ದೂರಿನ ಅನ್ವಯ ವೆಂಕಟಸ್ವಾಮಿ ತಪ್ಪಿತಸ್ಥ ಎಂದು ಕೋರ್ಟ್ ವಿಧಿಸಿದ್ದು ಸಾಲಕ್ಕೆ ಪ್ರತಿಯಾಗಿ ನೀಡಿದ್ದ ಚೆಕ್ ಬೌನ್ಸ್ ಆದ ಹಿನ್ನೆಲೆ ದೂರು ದಾಖಲಿಸಿದ್ದರು ಎನ್ನಲಾಗಿದೆ.

Join Whatsapp
Exit mobile version