Home ಟಾಪ್ ಸುದ್ದಿಗಳು ಸರಕಾರಿ ಬಸ್ಸಿನಲ್ಲಿ ಧಾರ್ಮಿಕ ಚಿಹ್ನೆ : ದೂರು ಕೊಟ್ಟ ಬಳಿಕ ಚಿಹ್ನೆ ತೆಗೆದುಹಾಕಿದ KSRTC

ಸರಕಾರಿ ಬಸ್ಸಿನಲ್ಲಿ ಧಾರ್ಮಿಕ ಚಿಹ್ನೆ : ದೂರು ಕೊಟ್ಟ ಬಳಿಕ ಚಿಹ್ನೆ ತೆಗೆದುಹಾಕಿದ KSRTC

ರಾಮನಗರ: ಸಾರ್ವಜನಿಕ ಸಾರಿಗೆ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಕಾನೂನಿಗೆ ವಿರುದ್ದವಾಗಿ ನಿರ್ದಿಷ್ಟ ಧರ್ಮದ ಚಿಹ್ನೆ ಯನ್ನು ಅಂಟಿಸಿರುವ ವಿಚಾರವಾಗಿ ಸಾರ್ವಜನಿಕರೊಬ್ಬರು ದೂರು ನೀಡಿದ ಬಳಿಕ KSRTC ಸಂಸ್ಥೆಯು ಚಿತ್ರವನ್ನು ತೆಗೆದುಹಾಕಿದೆ.

ಎಲ್ಲಾ ಧರ್ಮದವರು ನಿತ್ಯ ಬಳಸುವ ಸರಕಾರಿ ಬಸ್ಸನ್ನು ಕೇಸರೀಕರಣಗೊಳಿಸಿರುವುದು ಸರಿಯಲ್ಲ. ಸರಕಾರಿ ಬಸ್ಸುಗಳು ಯಾವುದೇ ಧರ್ಮದ ಸೊತ್ತಲ್ಲ, ಬಸ್ಸಲ್ಲಿರುವ ಧಾರ್ಮಿಕ ಸಂಕೇತವನ್ನು ತೆರವುಗೊಳಿಸುವಂತೆ ವ್ಯಕ್ತಿಯೊಬ್ಬರು ಟ್ವಿಟರ್ ಮೂಲಕ ದೂರು ನೀಡಿದ ನಂತರ ಲಗತ್ತಿಸಲಾಗಿರುವ ಧಾರ್ಮಿಕ ಚಿಹ್ನೆಯನ್ನು ತೆರವುಗೊಳಿಸಿದೆ.

ಈ ಬಗ್ಗೆ ಟ್ವಿಟರ್ ಮೂಲಕ KSRTC ಸಂಸ್ಥೆಯು ದೂರನ್ನು ದಾಖಲಿಸಿ ಕ್ರಮಕೈಗೊಂಡಿದೆ.

Join Whatsapp
Exit mobile version