Home ಟಾಪ್ ಸುದ್ದಿಗಳು ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಸೇನಾ ಸಾರಥ್ಯ ವಹಿಸಿಕೊಂಡ ಎಂಜಿನಿಯರ್‌

ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಸೇನಾ ಸಾರಥ್ಯ ವಹಿಸಿಕೊಂಡ ಎಂಜಿನಿಯರ್‌

ಹೊಸದಿಲ್ಲಿ: ಭಾರತೀಯ ಭೂಸೇನೆಯ 29ನೇ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಪಾಂಡೆ ಅವರು ಇದೇ 30ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 13 ಲಕ್ಷ ಯೋಧರಿರುವ ಬಲಿಷ್ಠ ಪಡೆಯ ನೇತೃತ್ವ ವಹಿಸುತ್ತಿರುವ ಮೊದಲ ಎಂಜಿನಿಯರ್‌ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ದೇಶದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಜಿನಿಯರ್‌ ವಿಭಾಗದ ಅಧಿಕಾರಿಯೊಬ್ಬರು ಭೂಸೇನೆಯ ಮುಖ್ಯಸ್ಥ(ಚೀಫ್ ಆಫ್ ದಿ ಆರ್ಮಿ ಸ್ಟಾಫ್) ಹುದ್ದೆಗೆ ಏರಿದ್ದಾರೆ.

ಭಾರತದಲ್ಲಿ ಯಾವಾಗಲೂ ಇನ್‌ಫೆಂಟ್ರಿ, ಆರ್ಮರ್ಡ್‌ ಕಾರ್ಪ್ಸ್ ಅಥವಾ ಆರ್ಟಿಲರಿ ವಿಭಾಗದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗಳೇ ಸೇನಾ ಮುಖ್ಯಸ್ಥರಾಗಿ ನೇಮಕಗೊಳ್ಳುತ್ತಾರೆ. ಕಾರಣ ಶತ್ರುಸೇನೆಯೊಂದಿಗೆ ಯುದ್ಧಭೂಮಿಯಲ್ಲಿ ಸೆಣಸಾಡುವಂತಹ ವಿಭಾಗದಿಂದ ಬಂದವರಿಗೇ ಆದ್ಯತೆ ನೀಡಲಾಗುತ್ತದೆ. ಈ ಹಿಂದಿನ 28 ಸೇನಾ ಮುಖ್ಯಸ್ಥರ ಪೈಕಿ 17 ಮಂದಿ ಇನ್‌ಫೆಂಟ್ರಿ ವಿಭಾಗದಿಂದ ಬಂದಿದ್ದರೆ, 6 ಮಂದಿ ಆರ್ಮರ್ಡ್‌ ಕಾರ್ಪ್ಸ್ ನಿಂದ, 5 ಮಂದಿ ಆರ್ಟಿಲರಿ ವಿಭಾಗದಿಂದ ಬಂದವರು. ಎಂಜಿನಿಯರ್‌ ವಿಭಾಗದ ಅಧಿಕಾರಿಯೊಬ್ಬರು ಉನ್ನತ ಹುದ್ದೆಗೆ ಏರುತ್ತಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version