Home ಟಾಪ್ ಸುದ್ದಿಗಳು ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ರತನ್ ರಂಜನ್ ವಿರುದ್ಧ FIR

ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್: ರತನ್ ರಂಜನ್ ವಿರುದ್ಧ FIR

0

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಚಿತ್ರವನ್ನು ಮಾರ್ಪ್ ಮಾಡಿ ಸ್ಯಾನಿಟರಿ ಪ್ಯಾಡ್‌ನೊಂದಿಗೆ ಎಕ್ಸ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ರತನ್ ರಂಜನ್ ಎಂಬುವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಯೂತ್ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕ ದೇವಿ ಅವರ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ, ರಾಹುಲ್ ಗಾಂಧಿ ಅವರ ಚಿತ್ರವಿರುವ ಸ್ಯಾನಿಟರಿ ಪ್ಯಾಡ್‌ ವ್ಯಾಪಕ ವೈರಲ್ ಆಗಿತ್ತು. ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರನ್ನು ಸೆಳೆಯಲು ಈ ‘ಗಿಮಿಕ್’ ಮಾಡುತ್ತಿದೆ ಟ್ರೋಲ್ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ರತನ್ ರಂಜನ್ ಅವರ ಪೋಸ್ಟ್ ಅವಹೇಳನಕಾರಿಯೆಂದು ಪರಿಗಣಿಸಿ, ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version