Home ಟಾಪ್ ಸುದ್ದಿಗಳು ವಂಚನೆ ಆರೋಪ: ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ಎಫ್​ಐಆರ್

ವಂಚನೆ ಆರೋಪ: ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ಎಫ್​ಐಆರ್

0

ಬೆಂಗಳೂರು: ನಿರ್ದೇಶಕಿ, ಮೋಟಿವೇಷನಲ್ ಸ್ಪೀಕರ್, ಮ್ಯಾನಿಫೆಸ್ಟೇಷನ್ ಕೋಚ್, ಲೈಫ್ ಕೋಚ್ ಎಂದೆಲ್ಲ ತಮ್ಮನ್ನು ಪರಿಚಯಿಸಿಕೊಳ್ಳುವ ವಿಸ್ಮಯ ಗೌಡ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ವಿಸ್ಮಯಾ ಗೌಡ ವಿರುದ್ಧ ಹಿಮಾನ್ವಿ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ₹6.5 ಲಕ್ಷ ಸಾಲ ಪಡೆದು ಹಿಂದಿರುಗಿಸದೇ ವಂಚನೆ ಮಾಡಿದ್ದಾರೆ, ಸಾಲ ಮರಳಿಸುವಂತೆ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ಹಿಮಾನ್ವಿ ದೂರು ದಾಖಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ವಿಸ್ಮಯ ವಿರುದ್ಧ ಎಫ್​ಐಆರ್ ದಾಖಲಿಸುವಂತೆ ಆದೇಶಿಸಿದೆ. ಅದರಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ವಿಸ್ಮಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ದೂರಿನಲ್ಲಿ ಏನಿದೆ..?

2019 ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹಿಮಾನ್ವಿಗೆ, ವಿಸ್ಮಯ ಗೌಡ ಪರಿಚಯವಾಗಿದ್ದರು. ತಾನು ಸಿನಿಮಾ ನಿರ್ದೇಶಕಿ ಹಾಗೂ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ನಲ್ಲಿ ಲೈಫ್ ಕೋಚರ್ ಆಗಿರುವುದಾಗಿ ಹೇಳಿಕೊಂಡಿದ್ದರು. ಪಿರ್ಯಾದುದಾರರು ಈಕೆಯ ಬಗ್ಗೆ ತಿಳಿದುಕೊಂಡು ಆರೋಪಿತೆಯ ಬಳಿ ಕೆಲವು ಬಾರಿ ಮ್ಯಾನಿಫೆಸ್ಟೇಶನ್ ಕ್ಲಾಸಸ್ ತೆಗೆದುಕೊಂಡಿದ್ದು ಆರೋಪಿತೆ ಕೆಲವು ಬಾರಿ ನಮ್ಮ ಕ್ಲಿನಿಕ್ಕೆ ಭೇಟಿ ನೀಡುತ್ತಿದ್ದು ಫೆಬ್ರವರಿ 2024 ರಲ್ಲಿ ವಿಸ್ಮಯಗೌಡ, ಹಿಮಾನ್ವಿ ಮನೆಗೆ ಭೇಟಿ ನೀಡಿದಾಗ ತನಗೆ ಹಣಕಾಸಿನ ತೊಂದರೆ ಇದ್ದು ಹಣ ನೀಡುವಂತೆ ಕೇಳಿಕೊಂಡಿದ್ದರು. ಆಗ ಹಿಮಾನ್ವಿ ಆರೋಪಿತೆಗೆ ತಮ್ಮ ತಾಯಿಯ ಖಾತೆಯಿಂದ ಪಡೆದ 5,00,000 ರೂ ಹಣವನ್ನು ಮತ್ತು ತನ್ನ ಉಳಿತಾಯ ಖಾತೆಯಲ್ಲಿದ್ದ 1,50,000 ರೂಗಳನ್ನು ಸೇರಿ ಒಟ್ಟು 6,50,000 ರೂ ಗಳನ್ನು ನೀಡಿದ್ದರು. ಆ ನಂತರ ಆರೋಪಿತೆ ಶ್ರೀಮತಿ ವಿಸ್ಮಯಗೌಡ ರವರು ಪೋಸ್ಟ್ ಡೆಟೆಡ್ ಚೆಕ್ ನಂ-080118 ರ ಮೂಲಕ 6,50,000 ರೂ ಗಳನ್ನು ವಿಸ್ಮಯ ಗೌಡ, ಹಿಮಾನ್ವಿಗೆ ನೀಡಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version