Home ಟಾಪ್ ಸುದ್ದಿಗಳು ಗಾಂಧಿ ಹಂತಕ ಗೋಡ್ಸೆಯ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು

ಗಾಂಧಿ ಹಂತಕ ಗೋಡ್ಸೆಯ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರು

ಗುಜರಾತ್ : ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಹಿಂದು ಸೇನೆ ಸ್ಥಾಪಿಸಿದ್ದ ಗೋಡ್ಸೆಯ ಪ್ರತಿಮೆಯನ್ನು ಇಂದು ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.


ಜಾಮ್ ನಗರದ ಕಾಂಗ್ರೆಸ್ ಅಧ್ಯಕ್ಷ ದಿಗುಭಾ ಜಡೇಜಾ ಹಾಗೂ ಕಾರ್ಯಕರ್ತರು ಪ್ರತಿಮೆ ಧ್ವಂಸಗೊಳಿಸಿದ್ದಾರೆ. ಧ್ವಂಸಗೊಳಿಸುತ್ತಿರುವ ಸಂದರ್ಭದಲ್ಲಿ ಕಾರ್ಯಕರ್ತರೆಲ್ಲರೂ ಸೇರಿ ಪ್ರತಿಮೆಯ ಸುತ್ತಲು ಕೇಸರಿ ಬಟ್ಟೆಯನ್ನು ಸುತ್ತಿದ್ದಾರೆ.


ಈ ಹಿಂದೆ ಹಿಂದೂ ಸೇನೆ ಜಾಮ್ ನಗರದಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪಿಸುವ ನಿರ್ಧಾರವನ್ನು ಪ್ರಕಟಿಸಿತ್ತು. ಆದರೆ ಸ್ಥಳೀಯ ಅಧಿಕಾರಿಗಳು ಜಾಗವನ್ನು ನೀಡಲು ನಿರಾಕರಿಸಿದ್ದರಿಂದ ಕಾರ್ಯಕರ್ತರು ಹನುಮಾನ್ ಆಶ್ರಮದಲ್ಲಿ ಪ್ರತಿಮೆಯನ್ನು ನಿರ್ಮಿಸಿತ್ತು. ಇದೀಗ ಗೋಡ್ಸೆ ಪ್ರತಿಮೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.

Join Whatsapp
Exit mobile version