Home ಟಾಪ್ ಸುದ್ದಿಗಳು ಅಮೆರಿಕದಲ್ಲಿ ಭೀಕರ ಅಪಘಾತ: ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಸಾವು

ಅಮೆರಿಕದಲ್ಲಿ ಭೀಕರ ಅಪಘಾತ: ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಸಾವು

0

ನವದೆಹಲಿ: ಅಮೆರಿಕದ ಅಲಬಾಮ ರಾಜ್ಯದ ಗ್ರೀನ್ ಕೌಂಟಿಯಲ್ಲಿ ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಭಾರತ ಮೂಲದ ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.

ಎಲ್ಲಾ ನಾಲ್ವರೂ ಕೂಡ ಹೈದರಾಬಾದ್ ಮೂಲದವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರೆನ್ನಲಾಗಿದೆ. ಅಟ್ಲಾಂಟಾದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿ ಡಾಲಸ್​ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿರುವಾಗ, ಮಾರ್ಗಮಧ್ಯೆ ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

ಸಂತ್ರಸ್ತರು ಮೂಲತಃ ಹೈದರಾಬಾದ್​ನ ತಿರುಮಲಗಿರಿ ಮೂಲದವರಾಗಿದ್ದಾರೆ. ಸಾವನ್ನಪ್ಪಿದವರನ್ನು ಬೆಜಿಗಂ ಶ್ರೀವೆಂಕಟ್ (40) ಮತ್ತು ಚೊಲ್ಲೆಟಿ ತೇಜಸ್ವಿನಿ (36) ಅವರ ಮಕ್ಕಳಾದ ಸಿದ್ಧಾರ್ಥ (9) ಮತ್ತು ಮೃದ (7) ಎಂಬುದು ತಿಳಿದು ಬಂದಿದೆ.

ರಜೆ ಹಿನ್ನೆಲೆಯಲ್ಲಿ ಶ್ರೀವೆಂಕಟ್​ ಅಟ್ಲಾಂಟಾಗೆ ತೆರಳಿದ್ದರು. ಮೂರು ದಿನಗಳ ಕಾಲ ಅಲ್ಲಿ ಸಮಯ ಕಳೆದ ಅವರು, ಮರಳಿ ಬರುವಾಗ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್​, ಶ್ರೀವೆಂಕಟ್​ ಪೋಷಕರು ಮತ್ತು ಸಹೋದರಿ ಅಲ್ಲಿಯೇ ಉಳಿದಿದ್ದಾರೆ. ಭಾನುವಾರ ಬೆಳಗ್ಗೆ ಮರಳುವಾಗ ಈ ಅನಾಹುತ ನಡೆದಿದೆ.

ಗ್ರೀನ್​ ಕೌಂಟಿಗೆ ಬರುತ್ತಿರುವಾಗ ಮಿನಿ ಟ್ರಕ್​ವೊಂದು ತಪ್ಪು ಮಾರ್ಗದಲ್ಲಿ ಬಂದು ವೆಂಕಟ್​ ಕಾರಿಗೆ ಗುದಿದ್ದು, ತಕ್ಷಣಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ನಾಲ್ವರು ಸುಟ್ಟು ಕರಕಲಾಗಿದ್ದು, ಅಪಘಾತ ಸ್ಥಳದಲ್ಲಿ ಶ್ರೀವೆಂಕಟ್​​ ಮಗ ಸಿದ್ಧಾರ್ಥ್​ ಶಾಲೆ ಐಡಿ ದೊರಕಿದ ಹಿನ್ಲೆಲೆಯಲ್ಲಿ ತನಿಖೆ ಮಾಡಿದಾಗ ಶ್ರೀವೆಂಕಟ್​​ ವಿಳಾಸ ಪತ್ತೆಯಾಗಿದೆ. ಸಾವನ್ನಪ್ಪಿದ ನಾಲ್ವರ ಡಿಎನ್​ಎ ಮಾದರಿಗಳನ್ನು ಫೋರೆನ್ಸಿಕ್​ ಲ್ಯಾಬ್​ಗೆ ಕಳುಹಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಪೊಲೀಸರು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version