Home ಟಾಪ್ ಸುದ್ದಿಗಳು ಫಾಸ್ಟ್ ಟ್ಯಾಗಿನಿಂದ ಇಂಧನದಲ್ಲಿ 20000 ಕೋಟಿ ಉಳಿತಾಯ : ನಿತಿನ್ ಗಡ್ಕರಿ.

ಫಾಸ್ಟ್ ಟ್ಯಾಗಿನಿಂದ ಇಂಧನದಲ್ಲಿ 20000 ಕೋಟಿ ಉಳಿತಾಯ : ನಿತಿನ್ ಗಡ್ಕರಿ.

ಪ್ರಯಾಣಿಕರಿಗೆ ತಲೆನೋವಾಗಿರುವ ಕಡ್ಡಾಯ ಫಾಸ್ಟ್ ಟ್ಯಾಗನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಸಮರ್ಥಿಸಿಕೊಂಡಿದ್ದಾರೆ. ಫಾಸ್ಟ್ ಟ್ಯಾಗಿನಿಂದ ಇಂಧನದಲ್ಲಿ ವರ್ಷಕ್ಕೆ  20,000 ಕೋಟಿ  ಉಳಿತಾಯವಾಗುತ್ತದೆ ಮತ್ತು ಕನಿಷ್ಠ 10,000 ಕೋಟಿ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

“ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಕ್ಕಾಗಿ ಹೆದ್ದಾರಿ ಬಳಕೆದಾರರಿಗೆ ಫಾಸ್ಟ್ಟ್ಯಾಗ್‌ಗಳನ್ನು ಕಡ್ಡಾಯಗೊಳಿಸುವುದರಿಂದ ಟೋಲ್ ಪ್ಲಾಝಾಗಳಲ್ಲಿನ ವಿಳಂಬವು ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಇಂಧನ ವೆಚ್ಚದಲ್ಲಿ ವಾರ್ಷಿಕ 20,000 ಕೋಟಿ ಉಳಿತಾಯವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

 ಕೇಂದ್ರ ಸಚಿವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಇದೊಂದು ಅರ್ಥಹೀನವಾದ ಸಮರ್ಥನೆ ಎಂದು ವಿಮರ್ಶಕರು ತಿಳಿಸಿದ್ದಾರೆ.

Join Whatsapp
Exit mobile version