ಮೈಸೂರು :ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹರಂಬಳ್ಳಿ ಗ್ರಾಮದ ಹೇಮಾವತಿ ರೈಸ್ ಮಿಲ್‌ನಲ್ಲಿ ನಕಲಿ ಗೊಬ್ಬರ ದಾಸ್ತಾನು ಪ್ರಕರಣ ಪತ್ತೆಯಾಗಿದೆ. ರೈಸ್ ಮಿಲ್‌ನಲ್ಲಿ ದಾಸ್ತಾನು ಮಾಡಿದ್ದ 85 ಮೂಟೆ ನಕಲಿ ಗೊಬ್ಬರವನ್ನು ತಹಶೀಲ್ದಾರ್ ಸಂತೋಷ್ ನೇತೃತ್ವದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪೋಟಾಷಿಯಂ, ಎಂಒಪಿ, ಉಪ್ಪು, ಡಿಎಪಿ ಇತ್ಯಾದಿ ಬಳಸಿ ತಯಾರಿಸುವ ಗೊಬ್ಬರಗಳ ಮಾದರಿಯಲ್ಲಿ ನಕಲಿ ಗೊಬ್ಬರ, ತಯಾರಿಸಲಾಗಿತ್ತು. ಮಣ್ಣು, ಕೆರೆಯ ಗೋಡು ಮಣ್ಣಿಗೆ ರೆಡ್ ಆಕ್ಸೈಡ್ ಬಣ್ಣ ಬೆರೆಸಿ ನಕಲಿ ಗೊಬ್ಬರ ಸಿದ್ಧಪಡಿಸಲಾಗಿತ್ತು. 85 ಮೂಟೆ ನಕಲಿ ಗೊಬ್ಬರ ವಶಕ್ಕೆ ತೆಗೆದುಕೊಂಡು ನಕಲಿ ಗೊಬ್ಬರ ಇಲಾಖಾ ಪರೀಕ್ಷೆಗೆ ರವಾನೆ ಮಾಡಲಾಗಿದೆ. ರೈತರು ಜಾಗರೂಪರಾಗಿರಬೇಕಾದ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.