ಸೂರಜ್ ರೇವಣ್ಣರ ವಿಚಾರದಲ್ಲೂ ನ್ಯಾಯಯುತ ತನಿಖೆ ಆಗಲಿ: ಆರ್ ಅಶೋಕ್

Prasthutha|

ಬೆಂಗಳೂರು: ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಸ್ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಪ್ರಜ್ವಲ್ ರೇವಣ್ಣನ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ಸೂರಜ್ ರೇವಣ್ಣರ ವಿಚಾರದಲ್ಲೂ ನ್ಯಾಯಯುತ ತನಿಖೆ ಆಗಲಿ ಎಂದು ಹೇಳಿದ್ದಾರೆ.

- Advertisement -

ಈ ಕುರಿತು ಮಾತನಾಡಿದ ಅವರು, ನಾನು ಸಹ ಮಾಧ್ಯಮದಲ್ಲಿ ಸೂರಜ್ ರೇವಣ್ಣ ಬಗ್ಗೆ ನೋಡಿದ್ದೇನೆ. ಸೂರಜ್ ರೇವಣ್ಣ ಸಹ ಆರೋಪ ಮಾಡಿದ್ದಾರೆ. ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಕೇಸ್ ನಲ್ಲಿ ಮೇಲ್ನೋಟಕ್ಕೆ ಗೊಂದಲ ಕಾಣಿಸುತ್ತಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದರು.

Join Whatsapp
Exit mobile version