ಜೈಪುರ: ರಾಜಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಮಧ್ಯೆ ರಾಜಸ್ತಾನದ ಸಿರೋಹಿ ಎಂಬಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕೊನೆಯ ಕ್ಷಣದಲ್ಲಿ ಮೈಕ್ ಬಳಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಭಾಷಣ ಮಾಡದೆ ಜನರ ಕ್ಷಮೆ ಕೇಳಿ ಹಿಂದಿರುಗಿದ ಘಟನೆ ನಡೆದಿದೆ.
ಮತ್ತೊಮ್ಮೆ ರಾಜಸ್ತಾನದ ಸಿರೋಹಿಗೆ ಬರುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಅದರಂತೆ ಭಾರಿ ಸಮಾವೇಶ ಸಿದ್ಧವಾಗಿತ್ತು. ಅವರು ಬರುವಾಗ ರಾತ್ರಿ 10 ಗಂಟೆ ಕಳೆದಿತ್ತು. ರಾತ್ರಿ ಮೈಕ್ ಬಳಸಲು ಕಾನೂನು ಪ್ರಕಾರ ಅವಕಾಶವಿಲ್ಲದ್ದರಿಂದ ಭಾಷಣ ಮಾಡದೆ ಜನರ ಕ್ಷಮೆ ಕೋರಿದ ಸಂದೇಶ ಬಂತು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಸಿರೋಹಿಯ ಅಬು ರಸ್ತೆಯಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಧ್ವನಿವರ್ಧಕದಲ್ಲಿ ಕೊನೆಯವರೆಗೂ ಪ್ರಧಾನಿ ಬರುತ್ತಿದ್ದಾರೆ ಎಂಬ ಹೇಳಿಕೆ ಕೇಳಿ ಬರುತ್ತಿತ್ತು. ಅಂತಿಮವಾಗಿ ಕ್ಷಮಿಸಿ ಅವರು ಬರುವುದಿಲ್ಲ ಎಂಬ ಹೇಳಿಕೆ ಬಂತು ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.
ನಾನು ಸಮಯಕ್ಕೆ ಅಲ್ಲಿಗೆ ಬರಲಾಗಲಿಲ್ಲ. ಆದ್ದರಿಂದ ದೂರದಿಂದಲೇ ಶುಭಹಾರೈಸಿ ಸಂದೇಶ ನೀಡಿ ಹೊರಡುತ್ತೇನೆ ಎಂದು ಪ್ರಧಾನಿಯವರ ಸಂದೇಶವನ್ನು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.