Home ಟಾಪ್ ಸುದ್ದಿಗಳು ತಾಜ್ ಮಹಲ್ ಶಹಜಹಾನ್ ಕೊಡುಗೆ ಅಲ್ಲ: ಪರಿಶೀಲಿಸಲು ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ಗೆ ಅರ್ಜಿ

ತಾಜ್ ಮಹಲ್ ಶಹಜಹಾನ್ ಕೊಡುಗೆ ಅಲ್ಲ: ಪರಿಶೀಲಿಸಲು ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ಗೆ ಅರ್ಜಿ

ಹೊಸದಿಲ್ಲಿ: ವಿಶ್ವವಿಖ್ಯಾತ ತಾಜ್ ಮಹಲ್ ಕಟ್ಟಡ ಶಹಜಹಾನ್ ನ ಕೊಡುಗೆ ಅಲ್ಲ. ಇದರ ನೈಜತೆ ಅರಿಯಲು ಸಮಿತಯೊಂದನ್ನು ರಚಿಸಲು ಸೂಚಿಸಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ಡಾ.ರಜನೀಶ್ ಸಿಂಗ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ.


ದಾಖಲೆಗಳು ಇಲ್ಲ ಎಂದು ಎನ್ ಸಿಆರ್ ಟಿ ಮಾಹಿತಿ ಹಕ್ಕು ಅರ್ಜಿ ಹಾಕಿದಾಗ ಉತ್ತರಿಸಿದೆ ಎಂದು ಡಾ.ರಜನೀಶ್ ಸಿಂಗ್ ಹೇಳಿದ್ದಾರೆ. ತನ್ನ ಬೇಡಿಕೆಯನ್ನು ಮುಂದಿಟ್ಟು ಅಲಹಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.


ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಶಹಜಹಾನ್ ತನ್ನ ಪತ್ನಿ ಮುಮ್ತಾಝ್ ಸ್ಮರಣೆಗಾಗಿ ಕಟ್ಟಿಸಿದ್ದಾರೆ ಎಂಬುದು ಇತಿಹಾಸದಲ್ಲಿ ದಾಖಲಾದ ಸತ್ಯ. ಆದರೆ ಸಂಘಪರಿವಾರ ಮೊಗಲ್ ಮತ್ತು ಇಸ್ಲಾಮಿಕ್ ಸಂಸ್ಕೃತಿಯನ್ನು ಇಲ್ಲವಾಗಿಸಲು ಪ್ರಯತ್ನ ಪಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

Join Whatsapp
Exit mobile version