Home ಟಾಪ್ ಸುದ್ದಿಗಳು ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆಗಳ ಕಾಲ ಸ್ಥಗಿತಗೊಂಡ...

ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆಗಳ ಕಾಲ ಸ್ಥಗಿತಗೊಂಡ ರೈಲು

0

ಜಾರ್ಖಂಡ್: ರೈಲು ಹಳಿಯಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಲು ರೈಲನ್ನು ಎರಡು ಗಂಟೆಗಳ ಸ್ಥಗಿತಗೊಳಿಸಿದ ಘಟನೆಯೂ ಜಾರ್ಖಂಡ್‌ನ ರಾಮಗಢದಲ್ಲಿ ನಡೆದಿದೆ.

ಈ ವಿಡಿಯೋವೊಂದು ಮಾನವೀಯತೆಗೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ದೃಶ್ಯ ನೋಡಿದ ಬಳಕೆದಾರರು ರೈಲ್ವೆ ಅಧಿಕಾರಿಗಳ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು ಕೇಂದ್ರ ಸಚಿವ ಭೂಪೇಂದ್ರ ಸಿಂಗ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಚಾಲಕ ಮತ್ತು ರೈಲ್ವೆ ಅಧಿಕಾರಿ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆನೆಯು ತನ್ನ ಮರಿಗೆ ಜನ್ಮ ನೀಡುವ ಸಂದರ್ಭದಲ್ಲಿ ರೈಲು ನಿರ್ವಾಹಕರು ಎರಡು ಗಂಟೆಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದರು. ಅಲ್ಲದೇ ಇಂತಹ ಹೃದಯಸ್ಪರ್ಶಿ ಘಟನೆಗಳನ್ನು ನೋಡುವುದು ಸಂತೋಷಕರವಾಗಿದೆ ಎಂದು ಬರೆದುಕೊಂಡಿದ್ದಾರೆ.

ರಾಮಗಢದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ನಿತೀಶ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಜೂನ್ 25 ರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಗರ್ಭಿಣಿ ಹೆಣ್ಣು ಆನೆ ಹೆರಿಗೆ ನೋವಿನಿಂದ ಹಳಿಗಳ ಮೇಲೆ ಮಲಗಿದೆ ಎನ್ನುವ ಮಾಹಿತಿ ಬಂದಿತು. ಆದರೆ ಈ ಆನೆಯೂ ರೈಲಿಗೆ ಸಿಲುಕಬಹುದು, ಹೀಗಾಗಿ ದಯವಿಟ್ಟು ಮಾರ್ಗದಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ನಿಲ್ಲಿಸುವಂತೆ ನನ್ನನ್ನು ಕೇಳಿಕೊಂಡರು ಎಂದಿದ್ದಾರೆ. ಈ ಮಾಹಿತಿ ಬಂದ ತಕ್ಷಣವೇ ಅರಣ್ಯ ಅಧಿಕಾರಿ ನಿತೀಶ್ ಕುಮಾರ್ ಬರ್ಕಕಾನಾದಲ್ಲಿರುವ ರೈಲ್ವೆ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಆ ಕೂಡಲೇ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಆನೆಯೂ ಮರಿಗೆ ಜನ್ಮ ನೀಡುವ ಸಲುವಾಗಿ ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version