ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ನಡುವೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ.
ಈ ಕುರಿತು ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಉಪೇಂದ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ “ಆಟೋ ರಿಕ್ಷಾ ” ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು ಎಂದು ಉಪೇಂದ್ರ ಹೇಳಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಆಟೋ ರಿಕ್ಷಾವನ್ನು ಸಾಮಾನ್ಯ ಚಿಹ್ನೆ ಎಂದು ಚುನಾವಣಾ ಆಯೋಗ ನಿಗದಿಪಡಿಸಿದೆ.
ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್
— Upendra (@nimmaupendra) February 23, 2023
“ ಆಟೋ ರಿಕ್ಷಾ “ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು 💐👍
Uttama Prajaakeeya party has got “Auto Riksha “ as common symbol for this Karnataka Assembly election 2023. Congratulations 💐 pic.twitter.com/RAQKU0TT8U