Home ಟಾಪ್ ಸುದ್ದಿಗಳು ನಾನು ಬಿಜೆಪಿ ಸಂಸದನಾಗಿದ್ದರಿಂದ ನನ್ನ ಮೇಲೆ ಇ.ಡಿ ದಾಳಿ ನಡೆಸದು : ಸಂಜಯ್ ಪಾಟೀಲ್

ನಾನು ಬಿಜೆಪಿ ಸಂಸದನಾಗಿದ್ದರಿಂದ ನನ್ನ ಮೇಲೆ ಇ.ಡಿ ದಾಳಿ ನಡೆಸದು : ಸಂಜಯ್ ಪಾಟೀಲ್

ಮುಂಬೈ : ನಾನು ಬಿಜೆಪಿ ಸಂಸದ ಹಾಗಾಗಿ ನನ್ನ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸದು ಎಂದು ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದ ಬಿಜೆಪಿ ಸಂಸದ ಸಂಜಯ್ ಪಾಟೀಲ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, “ನಾನು ಬಿಜೆಪಿ ಸಂಸದನಾಗಿರುವುದರಿಂದ ಇ.ಡಿ ನನ್ನ ಬಳಿ ಬಾರದು. 40 ಲಕ್ಷ ಮೌಲ್ಯದ ಐಷಾರಾಮಿ ಕಾರು ಖರೀದಿಸುವುದಕ್ಕಾಗಿ ಸಾಲ ತೆಗೆದುಕೊಳ್ಳಬೇಕಿದೆ. ನಮ್ಮ ಸಾಲದ ಮೊತ್ತ ನೋಡಿದರೆ ಇ.ಡಿಗೆ ಆಶ್ಚರ್ಯವಾಗಲಿದೆ” ಎಂದಿದ್ದಾರೆ,

ಇನ್ನು ಬಿಜೆಪಿಯವರ ಮೇಲೆ ಯಾವುದೇ ತನಿಖೆ ಇರುವುದಿಲ್ಲ. ಹಾಗಾಗಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಇತ್ತೀಚೆಗೆ ಹೇಳಿದ್ದರು.ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರ ಸರ್ಕಾರವು ಇ.ಡಿ ಹಾಗೂ ಎನ್‌ಸಿಬಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಇತ್ತೀಚೆಗೆ ಆರೋಪಿಸಿದ್ದರು.

Join Whatsapp
Exit mobile version