ಮಥುರಾ: ಉತ್ತರ ಪ್ರದೇಶದಲ್ಲಿ ರಿಕ್ಷಾ ಚಾಲಕನೊಬ್ಬನಿಗೆ ಐಟಿ ಇಲಾಖೆ 3 ಕೋಟಿ ರೂ. ಆದಾಯ ತೆರಿಗೆ ನೋಟಿಸ್ ಕಳುಹಿಸಿದೆ.
ಆದಾಯ ತೆರಿಗೆ ಇಲಾಖೆಯ ನೋಟೀಸು ನೋಡಿ ಗಾಬರಿಗೊಂಡ ರಿಕ್ಷಾ ಚಾಲಕ ಪೊಲೀಸರನ್ನು ಸಂಪರ್ಕಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಯಾರೋ ತನಗೆ ಮೋಸ ಮಾಡುತ್ತಿದ್ದಾರೆ ಎಂದು ರಿಕ್ಷಾ ಚಾಲಕ ಪೊಲೀಸರಿಗೆ ದೂರು ನೀಡಿದ್ದರು.
ಮಥುರಾದ ಬಕಲ್‌ಪುರ್ ಪ್ರದೇಶದ ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಅವರಿಗೆ ಆದಾಯ ತೆರಿಗೆ ಇಲಾಖೆಯು 3 ಕೋಟಿ ರೂಪಾಯಿಯ ನೋಟಿಸ್ ನೀಡಿದೆ.