Home ಟಾಪ್ ಸುದ್ದಿಗಳು ತಮಿಳುನಾಡು ಉನ್ನತ ಶಿಕ್ಷಣ ಸಚಿವ, ಪುತ್ರ ಗೌತಮ್ ಮನೆ ಮೇಲೆ ಇ.ಡಿ ದಾಳಿ

ತಮಿಳುನಾಡು ಉನ್ನತ ಶಿಕ್ಷಣ ಸಚಿವ, ಪುತ್ರ ಗೌತಮ್ ಮನೆ ಮೇಲೆ ಇ.ಡಿ ದಾಳಿ

ಚೆನ್ನೈ: ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ.ಪೊನ್ಮುಡಿ ಅವರ ವಿಲ್ಲುಪುರಂ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.


ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ಅಧಿಕಾರಿಗಳು ಸಚಿವ ಪೊನ್ಮುಡಿ ಹಾಗೂ ಅವರ ಪುತ್ರ ಗೌತಮ್ ಸಿಗಮಣಿ ನಿವಾಸದಲ್ಲೂ ತಪಾಸಣೆ ನಡೆಸುತ್ತಿದ್ದಾರೆ.


ಪೊನ್ಮುಡಿ ಅವರು 2007 ಮತ್ತು 2011ರ ನಡುವೆ ಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಅವಧಿಯಲ್ಲಿ ಕ್ವಾರಿ ಪರವಾನಗಿಯನ್ನು ಉಲ್ಲಂಘಿಸಿದ್ದು, ಸಾರ್ವಜನಿಕ ಬೊಕ್ಕಸಕ್ಕೆ ₹28 ಕೋಟಿಗೂ ಹೆಚ್ಚು ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Join Whatsapp
Exit mobile version