Home ಟಾಪ್ ಸುದ್ದಿಗಳು ಡ್ರಗ್ಸ್ ಪ್ರಕರಣ: ಪ್ರೆಸ್ಟೀಜ್ ಕಂಪನಿ ಸಿಇಒಗೆ ನೋಟಿಸ್ !

ಡ್ರಗ್ಸ್ ಪ್ರಕರಣ: ಪ್ರೆಸ್ಟೀಜ್ ಕಂಪನಿ ಸಿಇಒಗೆ ನೋಟಿಸ್ !

ಬೆಂಗಳೂರು: ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ ಆರೋಪದಡಿ ಪ್ರೆಸ್ಟೀಜ್ ಗ್ರೂಪ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಅಂಜುಂ ರಜಾಕ್ ಅವರನ್ನು ಶುಕ್ರವಾರ ಹಚ್ಚಿನ ವಿಚಾರಣೆಗಾಗಿ ಹಾಜರಾಗುವಂತೆ ಗೋವಿಂದಪುರ ಪೊಲೀಸರು ಸೂಚಿಸಿದ್ದಾರೆ.

ವಾಟ್ಸಾಪ್ ಮೆಸೇಜ್ ಮೂಲಕ ಅಂಜುಂ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ವಕೀಲರೊಂದಿಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಅಂಜುಂ ಅರ್ಧ ಗಂಟೆ ಪೊಲೀಸರ ಪ್ರಶ್ನೆಗೆ ಉತ್ತರಿಸಿದರು‌‌. ನನಗೆ ಯಾವುದೇ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕವಿಲ್ಲ. ಬಂಧಿತನಾಗಿರುವ ಆರೋಪಿ ಥಾಮಸ್ ಗೆ ತನ್ನ ಕಾರು ಚಾಲಕನೊಂದಿಗೆ ಸಂಪರ್ಕವಿರಬಹುದು ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ‌.

Join Whatsapp
Exit mobile version