Home ಟಾಪ್ ಸುದ್ದಿಗಳು ಇಂದು ಹಿಂದುತ್ವದ ಮತಬ್ಯಾಂಕ್ ಅನ್ನು ಪ್ರತಿಪಾದಿಸುವವರು ಬಾಬರಿ ಧ್ವಂಸವಾಗುತ್ತಿದ್ದಾಗ ಓಡಿ ಹೋಗಿದ್ದರು : ಸಂಜಯ್ ರಾವತ್

ಇಂದು ಹಿಂದುತ್ವದ ಮತಬ್ಯಾಂಕ್ ಅನ್ನು ಪ್ರತಿಪಾದಿಸುವವರು ಬಾಬರಿ ಧ್ವಂಸವಾಗುತ್ತಿದ್ದಾಗ ಓಡಿ ಹೋಗಿದ್ದರು : ಸಂಜಯ್ ರಾವತ್

► ಬಾಬರಿಯನ್ನು ಧ್ವಂಸ ಮಾಡಿದ ಕಾರ್ಯಕರ್ತರ ಬಗ್ಗೆ ಶಿವಸೇನೆ ಹೆಮ್ಮೆಪಟ್ಟಿದೆ !

ಮಹಾರಾಷ್ಟ್ರ: 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಧ್ವಂಸವಾಗುತ್ತಿದ್ದಾಗ ಇಂದು ಹಿಂದುತ್ವದ ಮತಬ್ಯಾಂಕ್ ಅನ್ನು ಪ್ರತಿಪಾದಿಸುವವರು ಓಡಿ ಹೋಗಿದ್ದರು ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಳಾಸಾಹೇಬ್ ಠಾಕ್ರೆ ಮತ್ತು ಶಿವಸೇನೆಯ ಕಾರ್ಯಕರ್ತರು ಹಿಂದೂಗಳ ಪರವಾಗಿ ದೃಢವಾಗಿ ನಿಂತಿದ್ದರು ಮತ್ತು ಬಾಬರಿಯನ್ನು ಧ್ವಂಸ ಮಾಡಿದ ತಮ್ಮ ಕಾರ್ಯಕರ್ತರ ಬಗ್ಗೆಯೂ ಶಿವಸೇನೆ ಹೆಮ್ಮೆಪಟ್ಟಿತ್ತು” ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೆ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್, ಹಿಂದೂ ವೋಟ್ ಬ್ಯಾಂಕ್ ಸೃಷ್ಟಿಸಿದ ಮೊದಲ ವ್ಯಕ್ತಿ ಛತ್ರಪತಿ ಶಿವಾಜಿ ಎಂದು ಹೇಳಿದ್ದರು, ಈ ಬಗ್ಗೆ ಪ್ರತಿಕ್ರಿಯಿಸಿರುವ ರಾವತ್ ಛತ್ರಪತಿ ಶಿವಾಜಿ ಮೊದಲ ಹಿಂದೂ ವೋಟ್ ಬ್ಯಾಂಕ್ ಅನ್ನು ಸೃಷ್ಟಿಸಿದರೋ ಎಂದು ತಿಳಿದಿಲ್ಲ, ಆದರೆ ಅವರು ದೇಶದಲ್ಲಿ ಮೊದಲ ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರು ಎಂದು ಹೇಳಿದ್ದಾರೆ. ಛತ್ರಪತಿ ಶಿವಾಜಿಯವರ ಬೋಧನೆಗಳನ್ನು ಬಾಳಾಸಾಹೇಬ್ ಠಾಕ್ರೆ ಹಾಗೂ ಅದಕ್ಕಿಂಲೂ ಮೊದಲು ಸಾವರ್ಕರ್ ಮಹಾರಾಷ್ಟ್ರದಲ್ಲಿ ಮತ್ತು ದೇಶಾದ್ಯಂತ ಪೋಷಿಸಿದರು ಎಂದು ಪ್ರತಿಪಾದಿಸಿದರು. .

ನಮಗೆ ಭಯಪಡುವುದನ್ನು ಹಿಂದುತ್ವ ಕಲಿಸುವುದಿಲ್ಲ. ನಾವು ದೃಢವಾಗಿ ನಿಂತು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ. ಕೇವಲ ರಾಜಕೀಯ ಮತ್ತು ಚುನಾವಣೆಗಾಗಿ ನಾವು ಹಿಂದುತ್ವವನ್ನು ಪ್ರತಿಪಾದಿಸುವುದಿಲ್ಲ, ನಮ್ಮ ಹಿಂದುತ್ವವು ಜನರಿಗೆ ಆಹಾರ, ಬಟ್ಟೆ ಮತ್ತು ವಸತಿ ಸಿಗುವಂತೆ ನೋಡಿಕೊಳ್ಳುವುದಾಗಿದೆ ” ಎಂದು ಇದೇ ವೇಳೆ ಹೇಳಿದ್ದಾರೆ.

Join Whatsapp
Exit mobile version