Home ಟಾಪ್ ಸುದ್ದಿಗಳು ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಾಗಿ ಸೀಲಿಂಗ್‌ ಫ್ಯಾನ್‌ ತೆರವು !

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಾಗಿ ಸೀಲಿಂಗ್‌ ಫ್ಯಾನ್‌ ತೆರವು !

ಬೆಂಗಳೂರು: ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯುವುದಕ್ಕೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಕಾಲೇಜು ಕೊಠಡಿಗಳ ಸೀಲಿಂಗ್‌ ಫ್ಯಾನ್‌ ತೆಗೆದುಹಾಕಲು ಆರಂಭಿಸಿದೆ.

ಕಾಲೇಜಿನ ಎಲ್ಲ ಕೊಠಡಿಗಳ ಸೀಲಿಂಗ್‌ ಫ್ಯಾನ್‌ ತೆಗೆದುಹಾಕಿ, ಗೋಡೆಗೆ ಅಳವಡಿಸುವಂಥ ಫ್ಯಾನ್‌ ಗಳನ್ನು ಹಾಕಲು ಆದೇಶಿಸಿದೆ. ಹಾಗೆಯೇ ಕಾಲೇಜಿನ ಟೆರೇಸ್‌ ಮತ್ತು ಬಾಲ್ಕನಿಗೆ ತೆರಳದಿರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಈ ವರ್ಷ ನಾಲ್ಕು ವಿದ್ಯಾರ್ಥಿಗಳು ಹಾಗೂ ಕಳೆದ ವರ್ಷ ಇಬ್ಬರು ವಿದ್ಯಾರ್ಥಿಗಳು ಐಐಎಸ್‌ಸಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜು ಸೀಲಿಂಗ್‌ ಫ್ಯಾನ್‌ ತೆರವುಗೊಳಿಸುವ ನಿರ್ಧಾರಕ್ಕೆ ಬಂದಿದೆ.

Join Whatsapp
Exit mobile version