Home ಟಾಪ್ ಸುದ್ದಿಗಳು ಡ್ರಗ್ಸ್ ದಂಧೆ : ಬಿಜೆಪಿ ಮುಖಂಡ ರಾಕೇಶ್ ಸಿಂಗ್, ಪುತ್ರರ ಬಂಧನ

ಡ್ರಗ್ಸ್ ದಂಧೆ : ಬಿಜೆಪಿ ಮುಖಂಡ ರಾಕೇಶ್ ಸಿಂಗ್, ಪುತ್ರರ ಬಂಧನ

ಕೊಲ್ಕತಾ : ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಎಂಬಾತನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಪುರ್ಬಾ ಬರ್ದಮಾನ್ ಜಿಲ್ಲೆ ಗಲ್ಸಿಯಲ್ಲಿ ರಾಕೇಶ್ ಸಿಂಗ್ ನನ್ನು ಬಂಧಿಸಲಾಗಿದೆ.

ನಗರದ ಬಂದರು ಪ್ರದೇಶದಲ್ಲಿರುವ ಬಿಜೆಪಿ ರಾಜ್ಯ ಸಮಿತಿ ಮುಖಂಡನಾಗಿರುವ ರಾಕೇಶ್ ಸಿಂಗ್ ಮನೆ ಪ್ರವೇಶಿಸದಂತೆ ಪೊಲೀಸ್ ಸಿಬ್ಬಂದಿಯನ್ನು ಆತನ ಪುತ್ರರಿಬ್ಬರು ತಡೆಯಲು ಯತ್ನಿಸಿದ್ದರು. ಹೀಗಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಆತನ ಇಬ್ಬರು ಪುತ್ರರನ್ನೂ ಬಂಧಿಸಲಾಗಿದೆ.

ಗಲ್ಸಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ನಾಕಾದಲ್ಲಿ ರಾಕೇಶ್ ಸಿಂಗ್ ನನ್ನು ಬಂಧಿಸಲಾಗಿದೆ. ಆತ ಅಜ್ಞಾತ ಸ್ಥಳಕ್ಕೆ ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ, ಇದಕ್ಕೂ ಮೊದಲು ಪೊಲೀಸರು ರಾಕೇಶ್ ಸಿಂಗ್ ಗೆ ಸಮನ್ಸ್ ಜಾರಿಗೊಳಿಸಿದ್ದರು. ಆದರೆ, ತಾನು ದೆಹಲಿಗೆ ಪ್ರಯಾಣಿಸುತ್ತಿದ್ದು, ಹಿಂದಿರುಗಿದ ಬಳಿಕ ಹಾಜರಾಗುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಿಜೆಪಿ ಯುವ ಮೋರ್ಚಾದ ನಾಯಕಿ ಪಮೇಲಾ ಗೋಸ್ವಾಮಿ ಕೊಕೇನ್ ಸಹಿತ ಬಂಧನವಾದ ಬಳಿಕ, ಆಕೆ ಮಾಧ್ಯಮಗಳ ಮುಂದೆ ರಾಕೇಶ್ ಸಿಂಗ್ ಹೆಸರು ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಕೇಶ್ ಸಿಂಗ್ ಗೆ ಸಮನ್ಸ್ ಜಾರಿಗೊಳಿಸಿದ್ದರು.

Join Whatsapp
Exit mobile version