Home ಟಾಪ್ ಸುದ್ದಿಗಳು ಉತ್ತರ ಪ್ರದೇಶಕ್ಕೆ 30 ಸಾವಿರ ಕೋಟಿ, ಕರ್ನಾಟಕಕ್ಕೆ 6 ಸಾವಿರ ಕೋಟಿ: ಡಿಕೆ ಸುರೇಶ್ ಆಕ್ರೋಶ

ಉತ್ತರ ಪ್ರದೇಶಕ್ಕೆ 30 ಸಾವಿರ ಕೋಟಿ, ಕರ್ನಾಟಕಕ್ಕೆ 6 ಸಾವಿರ ಕೋಟಿ: ಡಿಕೆ ಸುರೇಶ್ ಆಕ್ರೋಶ

ರಾಮನಗರ: ಕೇಂದ್ರದಿಂದ 26 ರಾಜ್ಯಗಳಿಗೆ ಜಿಎಸ್‌ ಟಿ (GST) ತೆರಿಗೆ ನಿನ್ನೆ ವಿತರಣೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೂ 6,310.40 ಕೋಟಿ ಹಣ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ ಸಿಂಹಪಾಲು ಸಿಕ್ಕಿದ್ದು ಬರೋಬ್ಬರಿ 30 ಸಾವಿರ ಕೋಟಿ ಹಣ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಡಿಕೆ ಸುರೇಶ್ ಅವರು ರಾಜ್ಯಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಡಿಕೆ ಸುರೇಶ್ ಅವರು, ಉತ್ತರ ಪ್ರದೇಶಕ್ಕೆ 30 ಸಾವಿರ ಕೋಟಿ ಹಣ ಕೊಟ್ಟಿದ್ದಾರೆ. ತಮಿಳುನಾಡಿಗೆ 7 ಸಾವಿರ ಕೋಟಿ ಕೊಟ್ಟಿದ್ದಾರೆ, ಚಿಕ್ಕರಾಜ್ಯವಾಗಿರುವ ಆಂಧ್ರ ಪ್ರದೇಶಕ್ಕೂ 7 ಸಾವಿರ ಕೋಟಿ ಕೊಟ್ಟವ್ರೆ. ಆದ್ರೆ, ಕರ್ನಾಟಕಕ್ಕೆ ಕೇವಲ 6 ಸಾವಿರ ಕೋಟಿ ಕೊಟ್ಟವ್ರೆ. ಇದು ಕೇಂದ್ರ ಸರ್ಕಾರ ಮಾಡ್ತಿರೋ ತಾರತಮ್ಯ ಅಲ್ಲವೇ ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡ್ತಾ ಇದೆ. ಇದರ ಬಗ್ಗೆ ನಾನು ಧ್ವನಿ ಎತ್ತಿದಾಗ ಸಾಕಷ್ಟು ಚರ್ಚೆ ಮಾಡಿದ್ರು. ಈಗ ಕೇಂದ್ರ ಮಂತ್ರಿಗಳಿದ್ದಾರೆ, ಸಾಕಷ್ಟು ಜನ ಸಂಸದರಿದ್ದಾರೆ. ಈ ಅನ್ಯಾಯದ ಬಗ್ಗೆ ಅವರು ಧ್ವನಿ ಎತ್ತಬೇಕು, ಅವರ ಮೇಲೆ ಜವಾಬ್ದಾರಿ ಇದೆ, ಅವರು ರಾಜ್ಯದ ಪರ ಧ್ವನಿ ಎತ್ತುತ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು.

Join Whatsapp
Exit mobile version